ಶಿರಾ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿ 25 ವರ್ಷ ಪೂರ್ಣಗೊಂಡ ಬೆಳ್ಳಿ ಹಬ್ಬದ ನೆನಪಿಗಾಗಿ ಬುಧವಾರ ಜೆಡಿಎಸ್ ಮುಖಂಡ ಸಿ.ಆರ್. ಉಮೇಶ್ ರೈತರಿಂದ ಹಣ್ಣುಗಳನ್ನು ಖರೀದಿಸಿ, ಆಸ್ಪತ್ರೆಯಲ್ಲಿನ ರೋಗಿಗಳಿಗೆ ಪೌಷ್ಟಿಕ ರಸಾಯನ ತಯಾರಿಸಿ ವಿತರಿಸಿದರು.
ಕರ್ನಾಟಕದ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿಸಿದ ದೇವೇಗೌಡರು ಹೆಮ್ಮೆಯ ಪ್ರತೀಕವಾಗಿದ್ದಾರೆ. ಅಧಿಕಾರವಧಿಯಲ್ಲಿ ರೈತಪರ ನಿಲುವು ತೆಗೆದುಕೊಳ್ಳುವ ಮೂಲಕ ರೈತರ ಬದುಕಿನಲ್ಲಿ ಆಶಾ ಕಿರಣ ಮೂಡಿಸಿದರು.
ಕೊರೊನಾ ಸಂಕಷ್ಟದಿಂದ ರೈತರು ಬೆಳೆದ ಹಣ್ಣುಗಳಿಗೆ ಮಾರುಕಟ್ಟೆ ಇಲ್ಲದೆ ಕಷ್ಟ ಅನುಭವಿಸುತ್ತಿರುವುದರಿಂದ ರೈತರಿಂದ ನೇರವಾಗಿ ಮಾವು, ಹಲಸು, ಬಾಳೆಹಣ್ಣು ಸೇರಿದಂತೆ ಅನೇಕ ತಾಜಾ ಹಣ್ಣುಗಳನ್ನು ಖರೀದಿಸಿ ಪೌಷ್ಟಿಕಯುಕ್ತ ರಸಾಯನ ತಯಾರಿಸಿ ಕೋವಿಡ್ ಸೊಂಕಿತರು ಹಾಗೂ ಆಸ್ಪತ್ರೆಯಲ್ಲಿನ ರೋಗಿಗಳಿಗೆ ವಿತರಿಸಲು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀನಾಥ್ ಹಾಗೂ ಡಾ.ಡಿ.ಎಂ.ಗೌಡ ಅವರಿಗೆ ಹಸ್ತಾಂತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.