ADVERTISEMENT

ಕೊರೊನಾ ಆತಂಕದ ನಡುವೆ ವೃತ್ತಿ ಪಾಲನೆಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 4:36 IST
Last Updated 21 ಜುಲೈ 2020, 4:36 IST
ಮೌಲ್ಯಮಾಪನದ ಪ್ರಯಾಣವನ್ನು ಪ್ರವಾಸದಂತೆ ಸಂಭ್ರಮಿಸುತ್ತಿರುವ ಶಿಕ್ಷಕರು
ಮೌಲ್ಯಮಾಪನದ ಪ್ರಯಾಣವನ್ನು ಪ್ರವಾಸದಂತೆ ಸಂಭ್ರಮಿಸುತ್ತಿರುವ ಶಿಕ್ಷಕರು   

ಹುಲಿಯೂರುದುರ್ಗ: ಜೂನ್ ತಿಂಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೌಲ್ಯಮಾಪನ ಕಾರ್ಯ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಚಾಲ್ತಿಯಲ್ಲಿದ್ದು, ಕೊನೆ ಹಂತದಲ್ಲಿದೆ.

ಕೊರೊನಾ ಆತಂಕದ ನಡುವೆಯೂ ನಿರಾತಂಕವಾಗಿ ಕಾರ್ಯ ನಿರ್ವಹಿಸಲು ಅನುಕೂಲ ಆಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಹುಲಿಯೂರುದುರ್ಗ ಹೋಬಳಿಯ ನಿಯೋಜಿತ ಶಿಕ್ಷಕರು ಹರ್ಷ ವ್ಯಕ್ತಪಡಿಸಿದರು.

ಹುಲಿಯೂರುದುರ್ಗದಿಂದ ನಿತ್ಯವೂ ಶಿಕ್ಷಕರನ್ನು ವಿವಿಧ ಮೌಲ್ಯಮಾಪನ ಕೇಂದ್ರಗಳಿಗೆ ಕರೆದೊಯ್ಯುವ ಹಾಗೂ ಮರಳಿ ಕರೆ ತರುವುದಕ್ಕೆ ಪೂರಕವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಿರುವುದು ಮೌಲ್ಯಮಾಪಕರ ಮೆಚ್ಚುಗೆಗೆ ಪಾತ್ರವಾಗಿದೆ.

ADVERTISEMENT

ಕೊರೊನಾ ನಿರ್ವಹಣೆಯ ಸಂಬಂಧವಾಗಿ ಮೌಲ್ಯಮಾಪನ ಕೇಂದ್ರ ಹಾಗೂ ವೈಯಕ್ತಿಕ ಸ್ಯಾನಿಟೈಸೇಷನ್‌ಗೆ ಕ್ರಮ ವಹಿರುವುದು, ಥರ್ಮಲ್ ಸ್ಕ್ರೀನಿಂಗ್, ಪರಸ್ಪರ ನಿಗದಿತ ಅಂತರ ಕಾಯ್ದುಕೊಳ್ಳುವ ಹಾಗೂ ಮುಖಗವಸು ಧರಿಸುವ ಇಲಾಖಾ ಕಾರ್ಯಸೂಚಿಗಳನ್ನು ಸ್ವಯಂ ಪ್ರೇರಿತವಾಗಿ ಅನುಸರಿಸುವಂತೆ ಮಾಡಿದೆ. ಆತಂಕ ದೂರ ಮಾಡಿದೆ ಎಂದು ಶಿಕ್ಷಕರು ಸಂಭ್ರಮ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.