
ಪ್ರಜಾವಾಣಿ ವಾರ್ತೆಮಾಗಡಿ: ತಾಲ್ಲೂಕಿನ ಚಿಕ್ಕತೊರೆ ಪಾಳ್ಯದ ಚಾಮುಂಡೇಶ್ವರಿ ದೇವಾಲಯದ 5ನೇ ವಾರ್ಷಿಕೋತ್ಸವ ಹಾಗೂ ಸೇವಾಲಾಲ್ ಜಯಂತಿ ಫೆ.29ರಿಂದ ಮಾ.1ರವರೆಗೆ ನಡೆಯಲಿದೆ ಎಂದು ಚಾಮುಂಡೇಶ್ವರಿ ಮತ್ತು ಮುನೇಶ್ವರಸ್ವಾಮಿ ದೇವಾಲಯ ಸೇವಾ ಸಮಿತಿ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.
ಬಾಚೇನಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಿಬಾಯಿ ಧನಂಜಯ ನಾಯ್ಕ್ ಫೆ.29ರಂದು ಬೆಳಿಗ್ಗೆ 9ಕ್ಕೆ ಗಂಗಾಪೂಜೆಯೊಂದಿಗೆ ವಾರ್ಷಿಕೋತ್ಸವ ಹಾಗೂ ಸೇವಾಲಾಲ್ ಜಯಂತಿಗೆ ಚಾಲನೆ ನೀಡಲಿದ್ದಾರೆ. ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಹೋಮ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೇವಾಲಾಲ್ ಜಯಂತಿ ಆಯೋಜಿಸಲಾಗಿದೆ ಎಂದು ದೇವಾಲಯ ಟ್ರಸ್ಟ್ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.