ADVERTISEMENT

ವಿ.ವಿ ಕಲಾ ಕಾಲೇಜು ದಾಖಲಾತಿ ಆರಂಭ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 14:30 IST
Last Updated 23 ಜುಲೈ 2020, 14:30 IST

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ 2020-21ನೇ ಸಾಲಿನ ಪ್ರಥಮ ವರ್ಷದ ಬಿಎ, ಬಿಎಸ್‍ಡಬ್ಲ್ಯು, ಬಿಕಾಂ, ಬಿಬಿಎಂ, ಬಿವಿಎ ಪದವಿ ತರಗತಿಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ವಿ.ವಿ ವೆಬ್‍ಸೈಟ್ www.tumkuruniversity.ac.inನಲ್ಲಿ ಲಭ್ಯವಿರುವ ಅರ್ಜಿ ನಮೂನೆಯಲ್ಲಿ ಆನ್‍ಲೈನ್ ಮೂಲಕ ಆ.18ರ ಒಳಗೆ ಅರ್ಜಿ ಸಲ್ಲಿಸಬಹುದು.

ಬಿಎ, ಬಿಎಸ್‍ಡಬ್ಲ್ಯೂ, ಬಿವಿಎ, ಬಿಬಿಎಂ ವಿಭಾಗದ ಸಾಮಾನ್ಯ ವರ್ಗದ ಸೀಟುಗಳಿಗೆ ಪ್ರವೇಶಮಿತಿಗೆ ಒಳಪಟ್ಟು ಪಿಯುಸಿಯಲ್ಲಿ ಶೇ 70ಕ್ಕಿಂತ ಹೆಚ್ಚು ಅಂಕ ಪಡೆದ ಹಾಗೂ ಬಿಕಾಂ ಸಾಮಾನ್ಯ ವರ್ಗದ ಸೀಟುಗಳಿಗೆ ಪ್ರವೇಶ ಮಿತಿಗೆ ಒಳಪಟ್ಟು ಶೇ 85ಕ್ಕಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳಿಗೆ ನೇರ ಪ್ರವೇಶ ನೀಡಲಾಗುತ್ತದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಆ.3ರಿಂದ 7ರ ನಡುವೆ ಕಾಲೇಜಿಗೆ ಬಂದು ಪ್ರವೇಶ ಪಡೆಯಬಹುದು. ಮೊದಲು ಬಂದವರಿಗೆ ಆದ್ಯತೆ ಆಧಾರದಲ್ಲಿ ದಾಖಲಾತಿ ಮಾಡಿಕೊಳ್ಳಲಾಗುತ್ತದೆ.

ಬಿಎ, ಬಿಎಸ್‍ಡಬ್ಲ್ಯೂ, ಬಿವಿಎ ತರಗತಿಗಳಿಗೆ ಮೀಸಲಾತಿ ಆಧಾರದ ಸೀಟುಗಳಿಗೆ ಆ.18ರಂದು ಹಾಗೂ ಬಿಕಾಂ, ಬಿಬಿಎಂ ವಿಭಾಗಕ್ಕೆ ಆ.20ರಂದು ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಎರಡು ಹಂತದಲ್ಲಿ ಶುಲ್ಕ ಪಾವತಿಸಲು ಅವಕಾಶವಿದೆ. ವಿವರಗಳಿಗೆ ವಿ.ವಿ ವೆಬ್‍ಸೈಟ್ ನೋಡಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.