ADVERTISEMENT

ನಕಲಿ ದಾಖಲೆ ಬಗ್ಗೆ ಬಾಲಕಿ ದೂರು: ಪೋಕ್ಸೋ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 2 ಮೇ 2019, 16:09 IST
Last Updated 2 ಮೇ 2019, 16:09 IST

ಗುಬ್ಬಿ:‘ತಾಲ್ಲೂಕಿನ ಗ್ರಾಮವೊಂದರ ಅಪ್ರಾಪ್ತ ಬಾಲಕಿಯನ್ನು ಮಾರಾಟ ಮಾಡಿದ್ದಾರೆನ್ನುವ’ ಆರೋಪದ ದಾಖಲೆ ಪತ್ರಗಳ ಬಗ್ಗೆ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿಗಳ ತಂಡ ಗುರುವಾರ ತನಿಖೆ ನಡೆಸಿತು.

ಇಡೀ ದಿನ ಈ ದಾಖಲೆ ಪತ್ರಗಳು ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡಿತು. ಬಾಲಕಿಯನ್ನು ಪತ್ತೆಮಾಡಿ ಸಾಂತ್ವನ ಹೇಳಿದ ಅಧಿಕಾರಿಗಳ ತಂಡ ಹೇಳಿಕೆ ಪಡೆಯಿತು.

ನಾನು ಭಾವನ ಮನೆಯಲ್ಲೇ ಇದ್ದುಕೊಂಡು ತಿಪಟೂರು ತಾಲ್ಲೂಕಿನ ಶಾಲೆಯೊಂದರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಈಚೆಗೆ ಪಾಸಾಗಿದ್ದೆನು. ಗುಬ್ಬಿ ತಾಲ್ಲೂಕಿನ ಸ್ವಗ್ರಾಮಕ್ಕೆ ಬಂದ ಮೇಲೆ ನನ್ನ ಭಾವ ನನ್ನನ್ನು ನನ್ನ ತಂದೆ ತಾಯಿ ಮಾರಾಟ ಮಾಡಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಿ ಮಾನ ನಷ್ಟ ಮಾಡಿದ್ದಾರೆ' ಎಂದು ಮಕ್ಕಳ ಸಂರಕ್ಷಣಾ ಅಧಿಕಾರಿ ಅಂಬಿಕಾ ಅವರ ಬಳಿ ಅಳಲು ತೋಡಿಕೊಂಡಿದ್ದಾರೆ.

ADVERTISEMENT

ಆರೋಪಿ ಭಾವ ನಾಪತ್ತೆಯಾಗಿದ್ದು, ಅಪ್ರಾಪ್ತ ಬಾಲಕಿಯ ದೂರಿನ ಮೇಲೆ ಚೇಳೂರು ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಇಬ್ಬರ ಹೇಳಿಕೆಗಳ ಬಗ್ಗೆ ತನಿಖೆ ನಡೆಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.