ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಶತಕ ದಾಟಿದೆ. ಶನಿವಾರದ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಲ್ಲಿ ಐದು ಮಂದಿ ಪುರುಷರು ಮೃತಪಟ್ಟಿರುವುದು ದೃಢಪಟ್ಟಿದೆ. ಮೃತರ ಸಂಖ್ಯೆ 101ಕ್ಕೆ ತಲುಪಿದೆ.
ಶನಿವಾರ ಹೊಸದಾಗಿ 101 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಸೋಂಕು ತಗುಲಿದವರ ಸಂಖ್ಯೆ 3,312ಕ್ಕೆ ಏರಿಕೆಯಾಗಿದೆ. ಕೊರೊನಾದಿಂದ ಗುಣಮುಖರಾದ 119 ಮಂದಿ ಶನಿವಾರ ಆಸ್ಪತ್ರೆಯಿಂದ ಮನೆಗಳಿಗೆ ತೆರಳಿದರು. 1,017 ಸಕ್ರಿಯ ಪ್ರಕರಣಗಳು ಇವೆ.
ತುಮಕೂರು ಶಾಂತಿನಗರ ಬಡಾವಣೆಯ 50 ವರ್ಷ, ಉಪ್ಪಾರಹಳ್ಳಿಯ 63 ವರ್ಷ, ತುರುವೇಕೆರೆ ತಾಲ್ಲೂಕು ಶಕ್ತಿನಗರದ 50 ವರ್ಷ, ತುಮಕೂರು ತಾಲ್ಲೂಕು ಹೆಬ್ಬೂರು ಡಿ.ಎಸ್.ಪಾಳ್ಯದ 50 ವರ್ಷ, ಪಾವಗಡ ತಾಲ್ಲೂಕು ಮರಿದಾಸರಹಳ್ಳಿ ಗ್ರಾಮದ 35 ವರ್ಷದ ಪುರುಷ ಮೃತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.