ADVERTISEMENT

ಕೊರೊನಾ: 280ಕ್ಕೆ ತಲುಪಿದೆ ಮೃತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 3:27 IST
Last Updated 27 ಸೆಪ್ಟೆಂಬರ್ 2020, 3:27 IST

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಶನಿವಾರ ಮತ್ತೆ 6 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 280ಕ್ಕೆ ತಲುಪಿದೆ.

ತುಮಕೂರು ನಗರದ ನರಜರಾಬಾದ್‌ನ 57 ವರ್ಷದ ಪುರುಷ, ಸದಾಶಿವನಗರದ 66 ವರ್ಷದ ಮಹಿಳೆ, ಕೃಷ್ಣನಗರದ 58 ವರ್ಷದ ಪುರುಷ ನಾಗವಲ್ಲಿ ಗ್ರಾಮದ 85 ವರ್ಷದ ಪುರುಷ, ಗುಬ್ಬಿ ತಾಲ್ಲೂಕು ಜಿ.ಹೊಸಹಳ್ಳಿಯ 77 ವರ್ಷದ ಪುರುಷ, ಪಾವಗಡದ 56 ವರ್ಷದ ಮಹಿಳೆ ಶನಿವಾರ ಮೃತಪಟ್ಟಿದ್ದಾರೆ. ಇದೇ ದಿನ ಜಿಲ್ಲೆಯಲ್ಲಿ 163 ಮಂದಿಗೆ ಕೊರೊನಾ ದೃಢವಾಗಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 14, ಗುಬ್ಬಿ 4, ಕೊರಟಗೆರೆ 3, ಕುಣಿಗಲ್ 16, ಮಧುಗಿರಿ 5, ಪಾವಗಡ 2, ಶಿರಾ 18, ತಿಪಟೂರು 1, ತುಮಕೂರು 91 ಮತ್ತು ತುರುವೇಕೆರೆಯ 9 ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ 96 ಪುರುಷರು ಹಾಗೂ 69 ಮಹಿಳೆಯರು ಇದ್ದಾರೆ.

ADVERTISEMENT

ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 267 ಮಂದಿ ಶನಿವಾರ ಗುಣಮುಖರಾಗಿ ಮನೆಗಳಿಗೆ ತೆರಳಿದರು. ಇಲ್ಲಿಯವರೆಗೂ ಒಟ್ಟು 12,049 ಮಂದಿಗೆ ಸೋಂಕು ತಗುಲಿದದು 9818 ಮಂದಿ ಗುಣಮುಖರಾಗಿದ್ದಾರೆ. 1,951 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.