ADVERTISEMENT

3 ಸಾವಿರ ದಾಟಿದ ಕೊರೊನಾ ಸೋಂಕಿತರು

ಸಾವಿರ ದಾಟಿದ ಸಕ್ರಿಯ ಪ್ರಕರಣಗಳು; 89ಕ್ಕೆ ತಲುಪಿದ ಸಾವಿನ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 16:48 IST
Last Updated 12 ಆಗಸ್ಟ್ 2020, 16:48 IST
ಶಿರಾ ತಾಲ್ಲೂಕಿನ ಬರಗೂರು ಪಂಚಾಯಿತಿ ವ್ಯಾಪ್ತಿಯ ರಂಗಾಪುರ ಗ್ರಾಮದಲ್ಲಿ ಸೀಲ್‌ಡೌನ್ ಪ್ರದೇಶಗಳಿಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದರು
ಶಿರಾ ತಾಲ್ಲೂಕಿನ ಬರಗೂರು ಪಂಚಾಯಿತಿ ವ್ಯಾಪ್ತಿಯ ರಂಗಾಪುರ ಗ್ರಾಮದಲ್ಲಿ ಸೀಲ್‌ಡೌನ್ ಪ್ರದೇಶಗಳಿಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದರು   

ತುಮಕೂರು: ಜಿಲ್ಲೆಯಲ್ಲಿ ಬುಧವಾರ 153 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಸೋಂಕಿತರ ಸಂಖ್ಯೆ 3,003 ತಲುಪಿದೆ. ಬುಧವಾರ ಮತ್ತೆ 3 ಮಂದಿಯ ಸಾವಿನ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು ಸಾವಿನ ಸಂಖ್ಯೆ 89ಕ್ಕೆ ತಲುಪಿದೆ.

ತುಮಕೂರಿನ ಎಚ್‌.ಎಂ.ಎಸ್.ಜನತಾ ಕಾಲೊನಿಯ 61 ಪುರುಷ, ವಿನೋಬನಗರದ 95 ವರ್ಷದ ಮಹಿಳೆ, ಟೂಡಾ ಲೇಔಟ್‌ನ 50 ವರ್ಷದ ಪುರುಷ ಕೊರೊನಾದಿಂದ ಮೃತಪಟ್ಟಿದ್ದಾರೆ. ಸೋಂಕಿನಿಂದ ಬಳಲುತ್ತಿದ್ದ 93 ಮಂದಿ ಗುಣಮುಖರಾಗಿ ಬುಧವಾರ ಮನೆಗಳಿಗೆ ತೆರಳಿದರು. ಜಿಲ್ಲೆಯಲ್ಲಿ ಇಲ್ಲಿಯವರೆಗೆ 1,883 ಮಂದಿ ಗುಣಮುಖರಾಗಿದ್ದು ಸಕ್ರಿಯ ಪ್ರಕರಣಗಳು 1,031ಕ್ಕೆ ತಲುಪಿದೆ.

ಎಲ್ಲ ತಾಲ್ಲೂಕುಗಳಲ್ಲಿಯೂ ಸೋಂಕಿನಿಂದ ಮೃತಪಟ್ಟ ಪ್ರಕರಣಗಳು ವರದಿಯಾಗಿವೆ. ತುಮಕೂರು ತಾಲ್ಲೂಕಿನಲ್ಲಿ ಗರಿಷ್ಠ ಸೋಂಕಿತರು ಮತ್ತು ಸಾವಿನ ಪ್ರಕರಣಗಳು ಇವೆ. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕದಲ್ಲಿದ್ದ 5,614 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ.

ADVERTISEMENT

ತಾಲ್ಲೂಕು;ಇಂದಿನ ಸೋಂಕಿತರು (ಆ.12);ಒಟ್ಟು ಸೋಂಕಿತರು;ಮರಣ

ಚಿ.ನಾ.ಹಳ್ಳಿ;2;154;3

ಗುಬ್ಬಿ;16;181;3

ಕೊರಟಗೆರೆ;16;189;2

ಕುಣಿಗಲ್;14;319;5

ಮಧುಗಿರಿ;4;196;3

ಪಾವಗಡ;23;231;2

ಶಿರಾ;15;223;5

ತಿಪಟೂರು;18;217;2

ತುಮಕೂರು;35;1,140;63

ತುರುವೇಕೆರೆ;10;153;1

ಒಟ್ಟು;153;3,003;89

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.