
ಪ್ರಜಾವಾಣಿ ವಾರ್ತೆ
ಪಾವಗಡ (ತುಮಕೂರು): ತಾಲ್ಲೂಕಿನ ವೈ.ಎನ್ ಹೊಸಕೋಟೆಯಲ್ಲಿ ಸೋಮವಾರ ಸಾಂಪ್ರದಾಯಿಕ ಗೋವಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಫಸಲು ಕಟಾವಿಗೆ ಬರುವ ಮುನ್ನ ದನ, ಕರುಗಳನ್ನು ಪೂಜಿಸುವುದು ವಾಡಿಕೆ. ಈ ಹಬ್ಬದಂದು ಉತ್ಸವ ಮೂರ್ತಿಗಳ ಸುತ್ತ ಜಾನುವಾರು ಪ್ರದಕ್ಷಿಣೆ ಹಾಕುವುದರಿಂದ ರೋಗರುಜಿನ ಬರುವುದಿಲ್ಲವೆಂಬ ನಂಬಿಕೆ ಈ ಭಾಗದಲ್ಲಿದೆ. ಗೌಡ ಗೊಂಚುಗಾರ, ಗುರಿಕಾರ, ತಳವಾರ, ಕುರುಬ ಗೌಡ, ಗೊಲ್ಲ ಗೌಡ, ಮನೆಗಾರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.