ಪಾವಗಡ: ಪಟ್ಟಣದ ಜೈನ್ ಹೊಸ ಬಡಾವಣೆ, ಜ್ಞಾನಬೋಧಿನಿ ಹಿಂಭಾಗದ ಬಡಾವಣೆ ಸೇರಿದಂತೆ ವಿವಿಧೆಡೆ ಕಿಡಿಗೇಡಿಗಳು ಭಾನುವಾರ ತಡರಾತ್ರಿ ಕಾರು, ದ್ವಿಚಕ್ರವಾಹನಗಳ ಮೇಲೆ ಕಲ್ಲೆಸೆದು ಪುಂಡಾಟ ಮೆರೆದಿದ್ದಾರೆ.
ಜೈನ್ ಬಡಾವಣೆಯ ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿನ ಮುಂಭಾಗ, ಹಿಂಬದಿಯ ಗಾಜುಗಳಿಗೆ ಕಲ್ಲು ಎಸೆದು ಹಾನಿ ಮಾಡಲಾಗಿದೆ. ಮನೆಗಳ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಕನ್ನಡಿ ಸೇರಿದಂತೆ ಬಿಡಿ ಭಾಗಗಳನ್ನು ಕದ್ದೊಯ್ಯಲಾಗಿದೆ. ಜ್ಞಾನಬೋಧಿನಿ ಹಿಂಭಾಗದ ಬಡಾವಣೆಯಲ್ಲಿಯೂ ಕಾರಿನ ಮೇಲೆ ಕಲ್ಲೆಸೆದು ಗಾಜುಗಳಿಗೆ ಹಾನಿ ಮಾಡಲಾಗಿದೆ ಎಂದು ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ.
ಕಳೆದ ವರ್ಷ ಶಿವರಾತ್ರಿ ಹಬ್ಬದ ವೇಳೆಯೂ ಮನೆಯ ಕಿಟಕಿ ಗಾಜುಗಳನ್ನು ಒಡೆಯಲಾಗಿತ್ತು. ಹಬ್ಬ ಹರಿದಿನಗಳಂದು ಕಿಡಿಗೇಡಿಗಳ ತಂಡ ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂದು ಬಡಾವಣೆ ನಿವಾಸಿಗಳು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.