ADVERTISEMENT

ಮಧುಗಿರಿ: 11ರಿಂದ ದಂಡಿನ ಮಾರಮ್ಮ ದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2025, 5:30 IST
Last Updated 12 ಫೆಬ್ರುವರಿ 2025, 5:30 IST
ದಂಡಿನ ಮಾರಮ್ಮ ದೇವಿ
ದಂಡಿನ ಮಾರಮ್ಮ ದೇವಿ   

ಮಧುಗಿರಿ: ಪಟ್ಟಣದ ದಂಡಿನ ಮಾರಮ್ಮ ದೇವಿ ಜಾತ್ರಾ ಮಹೋತ್ಸವ ಮಾರ್ಚ್ 11ರಿಂದ 21ರ ವರೆಗೆ ನಡೆಯುತ್ತದೆ ಎಂದು ಉಪವಿಬಾಗಾಧಿಕಾರಿ ಗೋಟೊರು ಶಿವಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಾರ್ಚ್ 11ರಂದು ಜಾತ್ರೆ ಆರಂಭವಾಗಲಿದೆ. 12ರಂದು ಗ್ರಾಮಸ್ಥರ ಆರತಿ, 13ರಂದು ಗುಗ್ಗರಿ ಗಾಡಿ ಸೇವೆ, 14ಕ್ಕೆ ರಥೋತ್ಸವ, 15ರಂದು ಉಯ್ಯಾಲೆ ಉತ್ಸವ, 16ರಂದು ಸಿಂಹವಾಹನ, 17ರಂದು ಚಂದ್ರಮಂಡಲ ವಾಹನ, 18ರಂದು ನವಿಲುವಾಹನ, 19 ರಂದು ಬುಧವಾರ ಭಂಡಾರ ಮತ್ತು ಬೆಳ್ಳಿ ಪಲ್ಲಕ್ಕಿ ಉತ್ಸವ, 20ಕ್ಕೆ ಅಗ್ನಿಕುಂಡ, 21ರಂದು ಮಡಿಲಕ್ಕಿ ಸೇವೆ ಮೂಲಕ ಜಾತ್ರೆ ಮುಕ್ತಾಯವಾಗಲಿದೆ.

ಗೋಷ್ಠಿಯಲ್ಲಿ ದೇಗುಲದ ಅರ್ಚಕ ಲಕ್ಷ್ಮಿಕಾಂತಾಚಾರ್, ಪಾರು ಪತ್ತೆದಾರ ಗಿರೀಶ್ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.