ADVERTISEMENT

ರಾಮಕೃಷ್ಣ ಬದಲಾವಣೆ ಯತ್ನಕ್ಕೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 14:11 IST
Last Updated 7 ಸೆಪ್ಟೆಂಬರ್ 2019, 14:11 IST

ತುಮಕೂರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರನ್ನು ಬದಲಾವಣೆ ಮಾಡಬೇಕು ಎಂದು ಕೆಲವರು ಆಗ್ರಹಿಸುತ್ತಿದ್ದಾರೆ. ಈ ಪ್ರಯತ್ನ ಪರಿಶಿಷ್ಟ ಜಾತಿಗೆ ಮಾಡುವ ಅನ್ಯಾಯ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಈ ಹಿಂದೆ ಕಾಂಗ್ರೆಸ್ ಕಚೇರಿಯಲ್ಲಿಯೇ ರಾಮಕೃಷ್ಣ ಅವರಿಗೆ ಅವಮಾನವಾಗುವ ಸನ್ನಿವೇಶ ಸೃಷ್ಟಿಸಲಾಗಿತ್ತು. ಇದರ ಹಿಂದೆ ಯಾವ ಮುಖಂಡರು ಇದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಡಾ.ಪರಮೇಶ್ವರ ಅವರು ಉಪಮುಖ್ಯಮಂತ್ರಿ ಆಗಿದ್ದನ್ನು ಕೆಲವರು ಈ ಹಿಂದೆ ಸಹಿಸಲಿಲ್ಲ. ಈಗ ರಾಮಕೃಷ್ಣ ಅವರು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವುದನ್ನೂ ಸಹಿಸುತ್ತಿಲ್ಲ. ಅವರನ್ನು ಸ್ಥಾನದಿಂದ ಕೆಳಕ್ಕಿಳಿಸಲು ಒತ್ತಾಯಿಸುತ್ತಿರುವುದನ್ನು ಸಮುದಾಯ ಸೂಕ್ಷ್ಮವಾಗಿ ಗಮನಿಸುತ್ತಿದೆ.

ADVERTISEMENT

ಡಾ.ಜಿ.ಪರಮೇಶ್ವರ ಹಾಗೂ ರಾಮಕೃಷ್ಣ ವಿರುದ್ಧ ಕುತಂತ್ರ ಮಾಡುತ್ತಿರುವವರು ಜಿಲ್ಲೆಯ ಎಲ್ಲಿಯೇ ಚುನಾವಣೆಗೆ ಸ್ಪರ್ಧಿಸಿದರೂ ಸಮುದಾಯ ಅವರ ಸೋಲಿಗೆ ಶ್ರಮಿಸಲಿದೆ ಎಂದು ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಗೂಳಹರಿವೆ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.