ADVERTISEMENT

ಕುಣಿಗಲ್ | ಕಾಂಗ್ರೆಸ್‌ ಶಾಸಕರಿಗೆ ಸೇರಿದ ಡಿನ್ನರ್ ಸೆಟ್ ವಶ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 8:05 IST
Last Updated 19 ಮಾರ್ಚ್ 2023, 8:05 IST

ಕುಣಿಗಲ್: ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಶನಿವಾರ ಬೆಳಿಗ್ಗೆ ಶಾಸಕ ಮತ್ತು ಸಂಸದರ ಭಾವಚಿತ್ರವಿದ್ದ ಡಿನ್ನರ್ ಸೆಟ್‌ಗಳನ್ನು ಹಂಚುತ್ತಿದ್ದ ಪುರಸಭೆ ಮಾಜಿ ಸದಸ್ಯನ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು, ತಲಾ ₹ 180 ಮೌಲ್ಯದ 191 ಡಿನ್ನರ್ ಸೆಟ್ ಮತ್ತು ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಪುರಸಭೆ ಮಾಜಿ ಸದಸ್ಯ ಪಾಪಣ್ಣ ಮತ್ತು ವಾಹನ ಚಾಲಕ ರಮೇಶ್‌ ಅವರು ಶಾಸಕ ಡಾ.ರಂಗನಾಥ್ ಮತ್ತು ಸಂಸದ ಡಿ.ಕೆ. ಸುರೇಶ್ ಭಾವಚಿತ್ರವಿದ್ದ ಡಿನ್ನರ್ ಸೆಟ್‌ಗಳನ್ನು ಸರಕು ಸಾಗಣೆ ವಾಹನದಲ್ಲಿ ತುಂಬಿಕೊಂಡು ಬಂದು ಹಂಚುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ಕಂದಾಯ ಇಲಾಖೆ ಅಧಿಕಾರಿ ಶಿವಾನಂದರೆಡ್ಡಿ ಅವರಿಗೆ ದೂರು ನೀಡಿದರು.

ಇದರ ಅನ್ವಯ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.