ADVERTISEMENT

ದೊಡ್ಡಹೊಸಹಳ್ಳಿ: ಮೇವಿನ ಬಣವೆ ಭಸ್ಮ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 13:08 IST
Last Updated 3 ಮಾರ್ಚ್ 2024, 13:08 IST
ಪುರವರ ಹೋಬಳಿಯ ದೊಡ್ಡಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಮೇವಿನ ಬಣವೆ ಉರಿಯುತ್ತಿರುವುದನ್ನು ಆರಿಸುತ್ತಿರುವ ಅಗ್ನಿಶಾಮಕದಳದ ಸಿಬ್ಬಂದಿ
ಪುರವರ ಹೋಬಳಿಯ ದೊಡ್ಡಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಮೇವಿನ ಬಣವೆ ಉರಿಯುತ್ತಿರುವುದನ್ನು ಆರಿಸುತ್ತಿರುವ ಅಗ್ನಿಶಾಮಕದಳದ ಸಿಬ್ಬಂದಿ   

ಕೊಡಿಗೇನಹಳ್ಳಿ: ಪುರವರ ಹೋಬಳಿ ದೊಡ್ಡಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ರೈತರ ಮೂರು ಮೇವಿನ ಬಣವೆ ಸುಟ್ಟು ಭಸ್ಮವಾಗಿವೆ.

ದೊಡ್ಡಹೊಸಹಳ್ಳಿಯ ಸರೋಜಮ್ಮ, ಸರಸ್ವತಮ್ಮ ಅವರ ರಾಸುಗಳ ಮೇವಿಗಾಗಿ ಶೇಖರಿಸಿದ್ದ ರಾಗಿ ಹುಲ್ಲಿನ ಬಣವೆಗಳಿಗೆ ಬೆಂಕಿ ತಗಲಿತ್ತು. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿದ್ದರಿಂದ ಸ್ಥಳಕ್ಕೆ ಬಂದಿದ್ದ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸುವಷ್ಟರಲ್ಲಿ ಬಣವೆಗಳು ಸಂಪೂರ್ಣ ನಾಶವಾಗಿವೆ.

ಬರಗಾಲದಲ್ಲಿ ಜಾನುವಾರುಗಳಿಗೆಂದು ಶೇಖರಿಸಿದ್ದ ₹1 ಲಕ್ಷ ಮೌಲ್ಯದ ಮೇವು ನಾಶವಾಗಿದ್ದು, ಸರ್ಕಾರದಿಂದ ನಷ್ಟ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ADVERTISEMENT

ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.