ADVERTISEMENT

ತಿಪಟೂರು | ನಾಯಿಗಳ ದಾಳಿ: ಬಾಲಕಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 24 ಮೇ 2025, 14:44 IST
Last Updated 24 ಮೇ 2025, 14:44 IST
<div class="paragraphs"><p>ನಾಯಿಗಳ ದಾಳಿ(ಸಾಂದರ್ಭಿಕ ಚಿತ್ರ)</p></div>

ನಾಯಿಗಳ ದಾಳಿ(ಸಾಂದರ್ಭಿಕ ಚಿತ್ರ)

   

ತಿಪಟೂರು: ತಾಲ್ಲೂಕಿನ ಕಸಬ ಹೋಬಳಿ ಅಯ್ಯನಬಾವಿ ಬೋವಿ ಕಾಲೋನಿಯಲ್ಲಿ ಬೀದಿಯಲ್ಲಿ ಆಟವಾಡುತ್ತಿದ್ದ ಆರು ವರ್ಷದ ಬಾಲಕಿ ನವ್ಯಾ ಮೇಲೆ ಬೀದಿನಾಯಿಗಳ ದಾಳಿ ನಡೆಸಿ ತಲೆ ಹಾಗೂ ಹೊಟ್ಟೆಯ ಭಾಗವನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ.

ನವ್ಯಾಳ ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಕೈ, ಕಾಲು ತೊಡೆಭಾಗವನ್ನು ಕಿತ್ತು ಹಾಕಿವೆ.

ADVERTISEMENT

ರಕ್ತದ ಮಡುವಿನಲ್ಲಿ ಬಿದ್ದು, ಕಿರುಚುತ್ತಿದ್ದ ಬಾಲಕಿಯನ್ನು ಕಂಡ ಸಾರ್ವಜನಿಕರು ನಾಯಿಗಳನ್ನು ಓಡಿಸಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.