ADVERTISEMENT

ಕುಣಿಗಲ್: ನಾಯಿ ದಾಳಿ, ಬಾಲಕಿಗೆ ತೀವ್ರಗಾಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 10:03 IST
Last Updated 5 ಅಕ್ಟೋಬರ್ 2019, 10:03 IST
ಕುಣಿಗಲ್ ಅಂದಾನಯ್ಯ ಬಡಾವಣೆಯಲ್ಲಿ ನಾಯಿ ದಾಳಿಗೆ ತೀವ್ರಗಾಯಗೊಂದ ಬಾಲಕಿ
ಕುಣಿಗಲ್ ಅಂದಾನಯ್ಯ ಬಡಾವಣೆಯಲ್ಲಿ ನಾಯಿ ದಾಳಿಗೆ ತೀವ್ರಗಾಯಗೊಂದ ಬಾಲಕಿ   

ಕುಣಿಗಲ್: ಪಟ್ಟಣದ ಅಂದಾನಯ್ಯ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ನಾಯಿ ಕಚ್ಚಿ ಎರಡು ವರ್ಷದ ಬಾಲಕಿ ರವಿ ಎಂಬುವವರ ಮಗಳು ಶುಭಾ ತೀವ್ರವಾಗಿ ಗಾಯಗೊಂಡಿದ್ದಾಳೆ.

ರಾತ್ರಿ ಎಂಟುವರೆ ಸಮಯದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ತನ್ನ ಅಕ್ಕನ ಬಳಿಗೆ ಹೋಗುವಾಗ ಬೀದಿ ನಾಯಿ ದಾಳಿ ಮಾಡಿದ್ದು, ತಲೆ, ಕೆನ್ನೆ ಮತ್ತು ಕಿವಿಗಳಿಗೆ ಕಚ್ಚಿ ತೀವ್ರಗಾಯಗೊಳಿಸಿದೆ.

ಗಾಯಗೊಂಡಿದ್ದ ಮಗುವಿಗೆ ಎಂ.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸಾಗಿಸಲಾಗಿದೆ.

ADVERTISEMENT

ನಾಯಿ ಮರಿಗಳನ್ನು ಹಾಕಿದ್ದು, ಮರಿಗಳ ಹತ್ತಿರ ಹೋದ ಬಾಲಕಿಯನ್ನು ಕಚ್ಚಿ ಗಾಯಗೊಳಿಸಿದೆ, ಶುಕ್ರವಾರ ಬೆಳಿಗ್ಗೆಯೂ ವ್ಯಕ್ತಿಯ ಮೇಲೆ ನಾಯಿ ದಾಳಿ ಮಾಡಿದೆ ಎಂದಯ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.