ADVERTISEMENT

ಮಧುಗಿರಿ: ಮಳೆಗೆ ಏಕಾಶಿಲಾ ಬೆಟ್ಟದ ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:18 IST
Last Updated 22 ಅಕ್ಟೋಬರ್ 2024, 14:18 IST
ಮಧುಗಿರಿಯಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ಏಕಾಶಿಲಾ ಬೆಟ್ಟದ ಮೇಲಿರುವ ಕುಂಬಾರ ಗುಂಡಿಯ ಬಳಿಯಿರುವ ಗೋಡೆ ಕುಸಿದಿದೆ
ಮಧುಗಿರಿಯಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ಏಕಾಶಿಲಾ ಬೆಟ್ಟದ ಮೇಲಿರುವ ಕುಂಬಾರ ಗುಂಡಿಯ ಬಳಿಯಿರುವ ಗೋಡೆ ಕುಸಿದಿದೆ   

ಮಧುಗಿರಿ: ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ಏಕಾಶಿಲಾ ಬೆಟ್ಟದ ಮೇಲಿರುವ ಕುಂಬಾರ ಗುಂಡಿಯ ಬಳಿಯ ಗೋಡೆ ಕುಸಿದಿದೆ.

ತಾಲ್ಲೂಕಿನಲ್ಲಿ ಇತ್ತೀಚಿಗೆ ಸುರಿಯುತ್ತಿರುವ ಮಳೆಗೆ ಏಕಾಶಿಲಾ ಬೆಟ್ಟದ ಕಲ್ಲಿನ ಕೋಟೆ ಮತ್ತು ಗೋಡೆಗಳು ಸಂಪೂರ್ಣವಾಗಿ ನೆನೆದು ಬೀಳುತ್ತಿವೆ. ಇತಿಹಾಸ ಸಾರುವ ಕೋಟೆಗಳು ಬೀಳುತ್ತಿರುವುದರಿಂದ ಪ್ರವಾಸಿಗರು ಬೇಸರಗೊಂಡಿದ್ದಾರೆ.

ಕಲ್ಲಿನ ಕೋಟೆಯ ಗೋಡೆಗಳಲ್ಲಿ ಗಿಡಗಳು ಬೆಳೆದು ಮರಗಳಾಗುತ್ತಿದ್ದರೂ, ಸಂಬಂಧಪಟ್ಟವರು ಸ್ವಚ್ಛಗೊಳಿಸದೆ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ಇತಿಹಾಸ ಸಾರುವ ಕೋಟೆಗಳು ಬಿರುಕು ಬಿಟ್ಟು ಬೀಳುವ ಹಂತ ತಲುಪಿವೆ.

ADVERTISEMENT

ಕೋಟೆ ಹೆಬ್ಬಾಗಿಲಿನ ಆನೆಬಾವಿಯ ಸಮೀಪದ ಕೋಟೆ ಕುಸಿದು ಹಲವು ವರ್ಷಗಳು ಕಳೆದರೂ ಸರಿಪಡಿಸುತ್ತಿಲ್ಲ. ಕೋಟೆಗಳನ್ನು ಸಂರಕ್ಷಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.