ADVERTISEMENT

ತಿಪಟೂರು: ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ, ಎರಡು ರಾಸು ಸಾವು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2025, 6:50 IST
Last Updated 29 ಏಪ್ರಿಲ್ 2025, 6:50 IST
   

ತಿಪಟೂರು: ತಾಲ್ಲೂಕಿನ ಕಲ್ಲಯ್ಯನಪಾಳ್ಯದಲ್ಲಿ ಮಂಗಳವಾರ ಬೆಳಿಗ್ಗೆ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಹಾಗೂ ಎರಡು ಸೀಮೆ ಹಸು ಮೃತಪಟ್ಟಿವೆ.

ಕಲ್ಲಯ್ಯನಪಾಳ್ಯದ ನಿವಾಸಿ ಯೋಗೀಶ್ (50) ಮೃತರು. ಎಂದಿನಂತೆ ತಮ್ಮ ರಾಸುಗಳನ್ನು ಮನೆಯ ಸಮೀಪದ ತೋಟದಲ್ಲಿ ಮೇಯಿಸಲು ಹೋದಾಗ ಅವಘಡ ಸಂಭವಿಸಿದೆ. ಯೋಗೀಶ್ ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದರು.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜು, ನೊಣವಿನಕೆರೆ ಪಿಎಸ್ಐ ಬಸವರಾಜು, ಬೆಸ್ಕಾಂ ಎಂಜಿನಿಯರ್ ಮನೋಹರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.