ADVERTISEMENT

ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಒತ್ತು

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 6:28 IST
Last Updated 4 ಜನವರಿ 2022, 6:28 IST
ಮಧುಗಿರಿಯಲ್ಲಿ ನಡೆದ ತಾಲ್ಲೂಕು ಜೀವಿಕ ಹಾಗೂ ಮಾದಿಗ ದಂಡೋರ ಸಂಘಟನೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಹೋರಾಟಗಾರರನ್ನು ಸನ್ಮಾನಿಸಲಾಯಿತು
ಮಧುಗಿರಿಯಲ್ಲಿ ನಡೆದ ತಾಲ್ಲೂಕು ಜೀವಿಕ ಹಾಗೂ ಮಾದಿಗ ದಂಡೋರ ಸಂಘಟನೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಹೋರಾಟಗಾರರನ್ನು ಸನ್ಮಾನಿಸಲಾಯಿತು   

ಮಧುಗಿರಿ: ‘ಸಮುದಾಯದ ಆರ್ಥಿಕ ಅಭಿವೃದ್ಧಿಯನ್ನು ಬಲಪಡಿಸಲು ಸಂಘಟನೆಯ ಜೊತೆಗೆ ಎಲ್ಲರೂ ಸಾಮೂಹಿಕ ಸಹಭಾಗಿತ್ವಕ್ಕೆ ಮುಂದಾಗಬೇಕು’ ಎಂದು ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ತೊಂಡೋಟಿ ರಾಮಾಂಜಿನಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಮಾದಿಗ ದಂಡೋರ ಒಳ ಮೀಸಲಾತಿ ಹೋರಾಟ ಸಮಿತಿ ಹಾಗೂ ಜೀವಿಕ ಸಂಘಟನೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಸಾಪ ತಾಲ್ಲೂಕು ಅಧ್ಯಕ್ಷ ಡಾ.ಮಹರಾಜು ಮಾತನಾಡಿದರು.

ADVERTISEMENT

ದಲಿತ ಒಕ್ಕೂಟದ ಅಧ್ಯಕ್ಷ ಜೀವಿಕ ಡಾ.ಸಂಜೀವಮೂರ್ತಿ ಮಾತನಾಡಿದರು. ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ತಿಪ್ಪಾಪುರ ಶ್ರೀರಾಮಪ್ಪ, ಜೀವಿಕ ಸಂಘಟನೆಯ ಸಂಚಾಲಕ ಹನುಮಂತರಾಯಪ್ಪ, ಉಪಾಧ್ಯಕ್ಷ ರಮೇಶ್, ಮುಖಂಡರಾದ ಶಿವಣ್ಣ, ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.