ADVERTISEMENT

ಇಂಗ್ಲಿಷ್ ಕಲಿಕೆ ಅನಿವಾರ್ಯ

ಜಿಲ್ಲಾ ಬಾಲಭವನದಲ್ಲಿ ಎಸ್‌ಎಚ್‌ವಿ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿ.ಬಿ.ಜ್ಯೋತಿಗಣೇಶ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 15:44 IST
Last Updated 20 ಜನವರಿ 2019, 15:44 IST
ಕಾರ್ಯಕ್ರಮವನ್ನು ಜಿ.ಬಿ.ಜ್ಯೋತಿಗಣೇಶ್‌ ಉದ್ಘಾಟಿಸಿದರು. ಸಾಹಿತಿ ಡಾ.ಕವಿತಾಕೃಷ್ಣ, ಡಾ.ಮಲ್ಲಿನಾಥ ಪ್ರಭು, ಕನ್ನಡ ಸೇನೆಯ ಧನಿಯಾ ಕುಮಾರ್, ಎಸ್ಎಚ್‌ವಿ ಶಾಲೆ ಮುಖ್ಯ ಶಿಕ್ಷಕ ನಳಿನಿ ಪ್ರಸಾದ್ ಇದ್ದಾರೆ
ಕಾರ್ಯಕ್ರಮವನ್ನು ಜಿ.ಬಿ.ಜ್ಯೋತಿಗಣೇಶ್‌ ಉದ್ಘಾಟಿಸಿದರು. ಸಾಹಿತಿ ಡಾ.ಕವಿತಾಕೃಷ್ಣ, ಡಾ.ಮಲ್ಲಿನಾಥ ಪ್ರಭು, ಕನ್ನಡ ಸೇನೆಯ ಧನಿಯಾ ಕುಮಾರ್, ಎಸ್ಎಚ್‌ವಿ ಶಾಲೆ ಮುಖ್ಯ ಶಿಕ್ಷಕ ನಳಿನಿ ಪ್ರಸಾದ್ ಇದ್ದಾರೆ   

ತುಮಕೂರು: ಎಲ್ಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಅವಶ್ಯ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದರು.

ನಗರದ ಜಿಲ್ಲಾ ಬಾಲಭವನದಲ್ಲಿ ಎಸ್‌ಎಚ್‌ವಿ ಶಾಲೆಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರಿ ಸಂಸ್ಥೆಗಳಷ್ಟೇ ಸೇವೆಯನ್ನು ಖಾಸಗಿ ಸಂಸ್ಥೆಗಳು ನೀಡುತ್ತಿವೆ. ಸಾಮಾನ್ಯ ವರ್ಗದ ಜನರು ಶಿಕ್ಷಣ ಪಡೆಯುವಲ್ಲಿ ಖಾಸಗಿ ಸಂಸ್ಥೆಗಳ ಪಾತ್ರ ಹಿರಿದು ಎಂದರು.

ADVERTISEMENT

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್‌ ಕಲಿಕೆ ಅನಿವಾರ್ಯ. ಕನ್ನಡ ಕಲಿತರೆ ಮಾತ್ರ ಇಂಗ್ಲಿಷ್‌ ಭಾಷೆಯನ್ನು ಅರ್ಥೈಸಿಕೊಳ್ಳಲು ಸಾಧ್ಯ. ಇದನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದು ಹೇಳಿದರು.

ಮಕ್ಕಳ ಆಸಕ್ತಿ ಇರುವ ಕ್ಷೇತ್ರದಲ್ಲಿ ಪೋಷಕರು ಶಿಕ್ಷಣ ಕೊಡಿಸಬೇಕು. ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಲು ಜಾಗತಿಕ ವಿದ್ಯಮಾನಗಳಿಗೆ ಅಗತ್ಯವಿರುವ ಕೌಶಲ ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.