ADVERTISEMENT

ಪಾವಗಡ: ಜಾಗತಿಕ ತಾಪಮಾನ ಸಮಸ್ಯೆಗೆ ಪರಿಸರ ಸಂರಕ್ಷಣೆಯೊಂದೇ ಪರಿಹಾರ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 13:39 IST
Last Updated 6 ಜೂನ್ 2025, 13:39 IST
ಪಾವಗಡ ನ್ಯಾಯಾಲಯದ ಆವರಣದಲ್ಲಿ ಗುರುವಾರ ಸಸಿ ನೆಡಲಾಯಿತು
ಪಾವಗಡ ನ್ಯಾಯಾಲಯದ ಆವರಣದಲ್ಲಿ ಗುರುವಾರ ಸಸಿ ನೆಡಲಾಯಿತು   

ಪಾವಗಡ: ಜಾಗತಿಕ ತಾಪಮಾನ ಸಮಸ್ಯೆಗೆ ಪರಿಸರ ಸಂರಕ್ಷಣೆಯೊಂದೇ ಪರಿಹಾರ ಎಂದು ನ್ಯಾಯಾದೀಶ ವಿ.ಮಾದೇಶ ತಿಳಿಸಿದರು.

ಪಟ್ಟಣದ ನ್ಯಾಯಾಲಯ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಸಿಲಿನ ತಾಪ ಹೆಚ್ಚಿರುವಾಗ ಜನತೆ ನೆರಳಿಗಾಗಿ ಮರವನ್ನು ಹುಡುಕಾಡುವುದು ಸಾಮಾನ್ಯ. ಆದರೆ ಸಸಿಗಳನ್ನು ನೆಟ್ಟು ಪೋಷಿಸಿದಲ್ಲಿ ಮಾತ್ರ ಮರದ ನೆರಳು ಪಡೆಯಬಹುದು ಎಂಬ ತಿಳುವಳಿಕೆ ಪ್ರತಿಯೊಬ್ಬರಲ್ಲೂ ಇರಬೇಕು. ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರದಲ್ಲಿ ಸಾಧ್ಯವಾದಷ್ಟು ಮರ ಗಿಡಗಳಲ್ಲಿ ಬೆಳೆಸಬೇಕು ಎಂದು ತಿಳಿಸಿದರು.

ADVERTISEMENT

ವಲಯ ಅರಣ್ಯ ಅಧಿಕಾರಿ ರಾಕೇಶ್, ಇಂದು ಸಾಂಕೇತಿಕವಾಗಿ ಪರಿಸರ ದಿನ ಆಚರಣೆ ಮಾಡಲಾಗುತ್ತಿದೆ. ತಾಲ್ಲೂಕಿನಲ್ಲಿ ಮಳೆಯ ಅಭಾವವಿದ್ದು, ಮಳೆ ಬಂದಾಗ ಸಸಿಗಳನ್ನು ನೆಡಲು ಹಲವು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ವಕೀಲ ಸಂಘದ ಅಧ್ಯಕ್ಷ ಶೇಷಾನಂದನ್, ಮನುಷ್ಯನ ಉಳಿವಿಗೆ ಅಗತ್ಯವಿರುವ ಪರಿಸರವನ್ನು ಸಂರಕ್ಷಿಸುವುದು ಎಲ್ಲರ ಹೊಣೆ ಎಂದರು.

ನ್ಯಾಯಾಲಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ನ್ಯಾಯಾಧೀಶರಾದ ಬಿ. ಪ್ರಿಯಾಂಕಾ, ಸಿ. ಮುನಿರತ್ನಮ್ಮ, ವಕೀಲ ಸಣ್ಣೀರಪ್ಪ, ವಕೀಲ ಸಂಘದ ಕಾರ್ಯದರ್ಶಿ ಪ್ರಭಾಕರ್ ರೆಡ್ಡಿ, ಉಪ ವಲಯ ಅರಣ್ಯಾಧಿಕಾರಿ ಬಸವರಾಜು, ಜಯಲಕ್ಷ್ಮಿ, ಕೇಶವ್, ಸಾಮಾಜಿಕ ಅರಣ್ಯ ಅಧಿಕಾರಿ ರಾಜಶೇಖರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.