ADVERTISEMENT

ಪರೀಕ್ಷೆ ರದ್ದು: ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 5:24 IST
Last Updated 16 ಜೂನ್ 2021, 5:24 IST
ತಿಪಟೂರಿನಲ್ಲಿ ಕಾಲೇಜಿನ ಗೇಟ್ ಮುಂಭಾಗದಲ್ಲಿ ಬೂದಗುಂಬಳ ಕಾಯಿ ಒಡೆದ ವಿದ್ಯಾರ್ಥಿಗಳು
ತಿಪಟೂರಿನಲ್ಲಿ ಕಾಲೇಜಿನ ಗೇಟ್ ಮುಂಭಾಗದಲ್ಲಿ ಬೂದಗುಂಬಳ ಕಾಯಿ ಒಡೆದ ವಿದ್ಯಾರ್ಥಿಗಳು   

ತಿಪಟೂರು: ಕೋವಿಡ್‌ನಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿರುವುದರಿಂದನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ 10ಕ್ಕೂ ಹೆಚ್ಚು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜು ಬಳಿ ತೆರಳಿ ಸಂಭ್ರಮಾಚರಣೆ ಮಾಡಿದ್ದಾರೆ.

ರಾಜ್ಯ ಸರ್ಕಾರ ಕಳೆದ ವಾರವೇ ಪಿಯುಸಿ ಪರೀಕ್ಷೆ ರದ್ದು ಘೋಷಿಸಿತ್ತು. ಲಾಕ್‍ಡೌನ್ ಇದ್ದ ಕಾರಣ ಯಾರೂ ಹೊರಗೆ ಬರದಂತಾಗಿತ್ತು. ಸೋಮವಾರ ಲಾಕ್‍ಡೌನ್ ಸಡಿಲಿಕೆಯಾದ ಕಾರಣ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಬಳಿ
ತೆರಳಿ ಗೇಟ್ ಬಳಿಯಲ್ಲಿ ಬೂದಗುಂಬಳ ಕಾಯಿ, ತೆಂಗಿನ ಕಾಯಿ ಒಡೆದು, ಪಟಾಕಿ ಸಿಡಿಸಿ,
ನೃತ್ಯ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರ ಜಯಕಾರ ಹಾಕಿರುವ ವಿದ್ಯಾರ್ಥಿಗಳು ಕಾಲೇಜಿಗೆ ಗುಡ್‌ಬಾಯ್ ಹೇಳಿ ನಮಸ್ಕರಿಸಿದ್ದಾರೆ. ಇದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.