ADVERTISEMENT

ತಿಗಳ ಸಮುದಾಯದ ಮುಖಂಡರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 2:16 IST
Last Updated 10 ಏಪ್ರಿಲ್ 2021, 2:16 IST
ತುಮಕೂರಿನಲ್ಲಿ ತಿಗಳ ಸಮುದಾಯದ ಮುಖಂಡರನ್ನು ಅಭಿನಂದಿಸಲಾಯಿತು
ತುಮಕೂರಿನಲ್ಲಿ ತಿಗಳ ಸಮುದಾಯದ ಮುಖಂಡರನ್ನು ಅಭಿನಂದಿಸಲಾಯಿತು   

ತುಮಕೂರು: ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜದಮೂಲ ಪುರುಷ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಆಚರಣೆಗೆ ನೆರವಾದ ಸಮಾಜದ ಮುಖಂಡರು, ಯಜಮಾನರನ್ನು ಶುಕ್ರವಾರ ನಗರದ ಹನುಮಂತಪುರ ಕೊಲ್ಲಾಪುರದಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ತಿಗಳ ಸಮಾಜದ ವತಿಯಿಂದ ಗೌರವಿಸಲಾಯಿತು.

ನಾಲ್ಕು ಕಟ್ಟೆಗಳ ಯಜಮಾನರಾದ ಟಿ.ಎಸ್.ಶಿವಕುಮಾರ್, ಕಡಬ ದಾಸೇಗೌಡ, ಟಿ.ಜಿ.ಹನುಮಂತರಾಜು, ತುರುವೇಕೆರೆ ಕೃಷ್ಣಪ್ಪ, ಹನುಮಂತರಾಜು, ಕುಣಿಗಲ್ ಮಂಜಣ್ಣ,, ಗಡಿಯ ಯಜಮಾನರಾದ ಗಂಗಹನುಮಯ್ಯ, ಮಾಗಡಿ ನಾರಾಯಣಪ್ಪ, ರಂಗಪ್ಪ, ಕಡಬ ಚಿಕ್ಕತಿಮ್ಮಯ್ಯ, ತುರುವೇಕೆರೆ ಆಣೆಕಾರ್ ರಾಜಣ್ಣ, ಕುಣಿಗಲ್ ಶಿವಣ್ಣ ಅವರನ್ನು ಸನ್ಮಾನಿಸಲಾಯಿತು.

ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜದ ಮುಖಂಡರಾದ ಟಿ.ಎಲ್.ಕುಂಭಯ್ಯ, ಡಿ.ಕುಂಭಿನರಸಯ್ಯ, ಎನ್.ಎಸ್.ಶಿವಣ್ಣ, ವಕೀಲ ನಾರಾಯಣಸ್ವಾಮಿ, ಹನುಮಂತರಾಜು, ಜಿ.ಪಂ ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ, ನಿವೃತ್ತ ಪ್ರಾಚಾರ್ಯ ಆಂಜನೇಯ, ಗುಬ್ಬಿ ಮಲ್ಲಪ್ಪ ಅವರನ್ನು ಅಭಿನಂದಿಸಲಾಯಿತು.

ADVERTISEMENT

ಮುಖಂಡ ಪ್ರೆಸ್ ರಾಜಣ್ಣ ಮಾತನಾಡಿ, ‘ಅಗ್ನಿ ಬನ್ನಿರಾಯಸ್ವಾಮಿ ಸ್ಮರಣೆ ಮಾಡುವ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮೂಡಿದೆ. ಸಮಾಜದ ಸಂಘಟನೆಗೆ ನೆರವಾಗುತ್ತಿರುವ ಯಜಮಾನರು, ಮುಖಂಡರನ್ನು ಗೌರವಿಸಿ, ಕೃತಜ್ಞತೆ ಹೇಳಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಪ್ರತಿ ವರ್ಷವೂ ಮಾರ್ಚ್ 28ರಂದು ಅಗ್ನಿಬನ್ನಿರಾಯ ಸ್ವಾಮಿ ಜಯಂತಿ ಆಚರಿಸಿ, ಸಮಾಜದಲ್ಲಿ ಒಗ್ಗಟ್ಟು ಮೂಡಲು ಹಿರಿಯರು ಮಾರ್ಗದರ್ಶನ ನೀಡಬೇಕು ಎಂದರು.

ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕಳ್ಳಿಪಾಳ್ಯದ ಎಚ್.ಬಸವರಾಜು, ಅಗ್ನಿಬನ್ನಿರಾಯ ಚರಿತ್ರೆ ಸಾರುವ ಹಾಡುಗಳ ಧ್ವನಿಮುದ್ರಿಕೆ ಸಿದ್ಧಮಾಡಿಕೊಟ್ಟ ಶ್ರೀನಿವಾಸ್, ಡ್ಯಾನಿಯಲ್, ಹೃತಿಕ್ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.