ಮಧುಗಿರಿ (ತುಮಕೂರು): ತಾಲ್ಲೂಕಿನವೀರೇನಹಳ್ಳಿ ತಾಂಡಾ ಬಳಿ ರೈತ ಹನುಮಂತರಾಯಪ್ಪ ಎಂಬುವವರಿಗೆ ಸೇರಿದದನದ ಕೊಟ್ಟಿಗೆಗೆ ಭಾನುವಾರ ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ಹಸುಗಳು ಬೆಂಕಿಗೆ ಆಹುತಿ ಆಗಿವೆ.
ಹನುಮಂತರಾಯಪ್ಪ ಜಮೀನಿನಲ್ಲಿರುವ ಕೊಟ್ಟಿಗೆಯಲ್ಲಿ ಹಸುಗಳನ್ನು ಕಟ್ಟಿ ಮಧುಗಿರಿಯ ಲಾಲಾ ಪೇಟೆಯಲ್ಲಿರುವ ಮನೆಗೆ ಬಂದಿದ್ದರು. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.