ADVERTISEMENT

ಕೊಳೆಗೇರಿಯಲ್ಲಿ ಗುಡಿಸಲಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 16:32 IST
Last Updated 11 ಆಗಸ್ಟ್ 2020, 16:32 IST
ಗುಡಿಸಲಿಗೆ ಬೆಂಕಿ ತಗುಲಿದ್ದು, ಬಾಲಕನ ದೇಹ ಸುಟ್ಟಿರುವುದು
ಗುಡಿಸಲಿಗೆ ಬೆಂಕಿ ತಗುಲಿದ್ದು, ಬಾಲಕನ ದೇಹ ಸುಟ್ಟಿರುವುದು   

ತುಮಕೂರು: ನಗರದ ಬನಶಂಕರಿ 2ನೇ ಹಂತದಲ್ಲಿರುವ ಇಸ್ಮಾಯಿಲ್ ನಗರದ ಹಂದಿ ಜೋಗಿ ಸ್ಲಂನ ಗಂಗಮ್ಮ ಗುರುಸ್ವಾಮಿ ಎಂಬುವರ ಗುಡಿಸಲಿಗೆ ಸೋಮವಾರ ರಾತ್ರಿ ಬೆಂಕಿ ತಗುಲಿದೆ.

ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಹಿಂದೆಯು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈಗಾದರೆಬದುಕುವುದಾದರೂ ಹೇಗೆ? ಗುಡಿಸಲಿನ ಅರ್ಧದಷ್ಟು ಹೊದಿಕೆ ಟಾರ್ಪಲ್, ಮಕ್ಕಳು ತೊಡುವ ಬಟ್ಟೆಗಳು ಮತ್ತು ಜೀವನಕ್ಕೆ ಕೂಡಿಟ್ಟ ದವಸಧಾನ್ಯಗಳು ಸುಟ್ಟಿವೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಕೊರೊನಾ ಬಂದಾಗಿನಿಂದ ಜೀವನ ನಡೆಸುವುದೇ ಕಷ್ಟವಾಗಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗುಡಿಸಲಿಗೆ ಬೆಂಕಿ ಹಚ್ಚಿ, ಭಯದ ವಾತಾವರಣ ಸೃಷ್ಟಿಸಿ, ಒಕ್ಕಲೆಬ್ಬಿಸುವ ಹುನ್ನಾರವನ್ನು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಶೀಘ್ರವೇ ಜಿಲ್ಲಾಡಳಿತ, ಮಹಾನಗರ ಪಾಲಿಕೆ ನಮ್ಮನ್ನು ನಾಗರಿಕರಂತೆ ಕಂಡು, ಇಲ್ಲಿನ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಗುಡಿಸಲು ನಿವಾಸಿಗಳು ಹಾಗೂ ತುಮಕೂರು ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.