ADVERTISEMENT

ಪಾವಗಡ: ಶಾಲೆಗಳಿಗೆ ಹೂವಿನ ಅಲಂಕಾರ

​ಪ್ರಜಾವಾಣಿ ವಾರ್ತೆ
Published 17 ಮೇ 2022, 4:16 IST
Last Updated 17 ಮೇ 2022, 4:16 IST
ಪಾವಗಡ ತಾಲ್ಲೂಕಿನ ಕೆ. ರಾಂಪುರ ಸರ್ಕಾರಿ ಶಾಲೆಯ ಆರಂಭೋತ್ಸವದ ಪ್ರಯುಕ್ತ ವಿಶೇಷವಾಗಿ ಅಲಂಕರಿಸಿ ಮಕ್ಕಳನ್ನು ಸ್ವಾಗತಿಸಲಾಯಿತು. ಮುಖ್ಯಶಿಕ್ಷಕಿ ಇಂದ್ರಮ್ಮ, ಸಹ ಶಿಕ್ಷಕರಾದ ಚಂದ್ರಶೇಖರ್ ರೆಡ್ಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಪುರಂ ನಾಗೇಶ್ ಉಪಸ್ಥಿತರಿದ್ದರು

ಪಾವಗಡ: ತಾಲ್ಲೂಕಿನ ಕೆ. ರಾಂಪುರ, ಅರಸೀಕೆರೆ ಸೇರಿದಂತೆ ವಿವಿಧ ಸರ್ಕಾರಿ ಶಾಲೆಗಳಲ್ಲಿ ಸೋಮವಾರ ಶಾಲೆಗಳನ್ನು ಅಲಂಕರಿಸಿ ಮಕ್ಕಳಿಗೆ ಹೂ ನೀಡುವ ಮೂಲಕ ಸ್ವಾಗತಿಸಲಾಯಿತು.

ತಾಲ್ಲೂಕಿನ ಸಾಕ್ಷರ ಗ್ರಾಮ ಕೆ. ರಾಂಪುರದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹೂ ನೀಡುವ ಮೂಲಕ ಬರಮಾಡಿಕೊಳ್ಳಲಾಯಿತು. ಮುಖ್ಯಶಿಕ್ಷಕಿ ಇಂದ್ರಮ್ಮ, ಸಹ ಶಿಕ್ಷಕರಾದ ಚಂದ್ರಶೇಖರ್ ರೆಡ್ಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಪುರಂ ನಾಗೇಶ್ ಮಕ್ಕಳಿಗೆ ಸಿಹಿ ವಿತರಿಸಿದರು.

ಅರಸೀಕೆರೆ ಸರ್ಕಾರಿ ಪ್ರೌಢಶಾಲೆ ಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮಕ್ಕಳಿಗೆ ಪುಷ್ಪಗುಚ್ಛ, ಸಿಹಿ ತಿಂಡಿ ನೀಡಲಾಯಿತು. ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮೊದಲನೇ ದಿನ ಆಟದ ಹಬ್ಬ ಆಚರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.