ADVERTISEMENT

ಕುಣಿಗಲ್ | ಜಾನಪದ ಜನರ ಬೆಸೆಯುವ ಕೊಂಡಿ: ಶಾಸಕ ಡಾ.ರಂಗನಾಥ್

ಕುಣಿಗಲ್‌ ಸರ್ಕಾರಿ ಪದವಿ ಕಾಲೇಜಿನಲ್ಲಿ ಜಾನಪದ ಉತ್ಸವ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 14:12 IST
Last Updated 30 ಏಪ್ರಿಲ್ 2025, 14:12 IST
ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಾನಪದ ಉತ್ಸವದಲ್ಲಿ ಶಾಸಕ ಡಾ.ರಂಗನಾಥ್ ಮಾತನಾಡಿದರು
ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಾನಪದ ಉತ್ಸವದಲ್ಲಿ ಶಾಸಕ ಡಾ.ರಂಗನಾಥ್ ಮಾತನಾಡಿದರು   

ಕುಣಿಗಲ್: ಗ್ರಾಮೀಣ ಪ್ರದೇಶದಲ್ಲಿರುವ ಅನೇಕ ಜಾನಪದ ಕಲಾ ಪ್ರಕಾರಗಳು ಜನರನ್ನು ಬೆಸೆಯುವ ಕೊಂಡಿಯಾಗಿದೆ. ನಶಿಸುತ್ತಿರುವ ಕಲೆಗಳನ್ನು ಯುವಜನರಿಗೆ ಪರಿಚಯಿಸಲು ಸರ್ಕಾರ ಎಲ್ಲ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಜನಪದ ಉತ್ಸವ ಆಚರಿಸುತ್ತಿದೆ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜಾನಪದ ಉತ್ಸವದಲ್ಲಿ ಅವರು ಮಾತನಾಡಿದರು.

ತರಗತಿಗೆ ಹಾಜರಾಗುವುದರಿಂದ ಜ್ಞಾನದಾಹ ಹೆಚ್ಚುವುದು. ಭವಿಷ್ಯ ಅರಿತು, ಗುರಿ ನಿರ್ಧರಿಸಿ ಒಳಿತಿಗಾಗಿ ಅಧ್ಯಯನ ಮಾಡಿ. ಸಮರ್ಥ ಗುರು ಮತ್ತು ಗುರಿ ಇದ್ದರೆ ಶ್ರಮ ವ್ಯರ್ಥವಾಗುವುದಿಲ್ಲ. ಆಸ್ತಿಯಲ್ಲಿ ಬಡತನವಿರಲಿ, ಜ್ಞಾನದ ಬಡತನ ಬೇಡ ಎಂದರು.

ADVERTISEMENT

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಬಯಲಾಟ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಸಣ್ಣಹೊನ್ನಯ್ಯ ಕಂಟಲಗೆರೆ ಮಾತನಾಡಿ, ಜಾನಪದ ಉತ್ಸವಗಳು ಸಂಸ್ಕೃತಿಯ ಪ್ರತೀಕ. ಜಾನಪದವು ಜನರ ಬಾಯಿಂದ ಜನಿಸಿದ್ದು ಸುಮಾರು 176 ವಿವಿಧ ಪ್ರಕಾರದ ಜಾನಪದ ಕಲೆಗಳಿಂದ ಸಂಸ್ಕೃತಿ ಶ್ರೀಮಂತವಾಗಿದೆ. ಹಳ್ಳಿಗಳ ಜನರನ್ನು ಭ್ರಾತೃತ್ವ, ಸಹೋದರತೆಯಡಿ ಒಗ್ಗೂಡಿಸುವ ಶಕ್ತಿ ಜನಪದ ಕಲೆಗಿದೆ ಎಂದರು.

ಶಾಸಕರನ್ನು ಎತ್ತಿನಗಾಡಿಯಲ್ಲಿ ವಿವಿಧ ಜನಪದ ತಂಡಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಸಾಂಪ್ರದಾಯಿಕ ಉಡುಪಿನಲ್ಲಿ ವಿದ್ಯಾರ್ಥಿಗಳು ರಾಶಿಪೂಜೆ, ಪೂಜಾ ಕುಣಿತ, ಡೊಳ್ಳು ಕುಣಿತ, ಜಾನಪದ ಕುಣಿತ, ವೀರಗಾಸೆ, ಜಾನಪದ ಆಟಗಳು, ಗೀತೆಗಳನ್ನು ಹಾಡಿ ಸಂಭ್ರಮಿಸಿದರು.

ಪ್ರಾಂಶುಪಾಲೆ ಮಾಯಾ ಸಾರಂಗಪಾಣಿ, ಪುರಸಭಾಧ್ಯಕ್ಷೆ ಮಂಜುಳ ನಾಗರಾಜು, ಅಧ್ಯಾಪಕರಾದ ರಾಮಾಂಜನಪ್ಪ, ಟಿ.ಎನ್. ನರಸಿಂಹಮೂರ್ತಿ, ಮ್ಯಾನೇಜರ್ ಚೆಲುವಮೂರ್ತಿ, ಸಿಡಿಸಿ ಸದಸ್ಯರಾದ ರೆಹಮಾನ್ ಷರೀಪ್ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಈಶ್ವರಪ್ಪ, ಎಂ.ಕೆ.ಮಂಜುಳ, ಬಿ.ನಿರ್ಮಲ, ಕೆ.ರವಿಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.