ADVERTISEMENT

ಚಿಕ್ಕನಾಯಕನಹಳ್ಳಿ | ಅರಣ್ಯಕ್ಕೆ ಬೆಂಕಿ: ಕಠಿಣ ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 14:15 IST
Last Updated 7 ಜೂನ್ 2025, 14:15 IST
ಚಿಕ್ಕನಾಯಕನಹಳ್ಳಿ ತಾಲ್ಲೂಕು ನ್ಯಾಯಾಲಯ ಆವರಣದಲ್ಲಿ ಪರಿಸರ ದಿನದ ಅಂಗವಾಗಿ ಸಸಿ ನೆಡಲಾಯಿತು
ಚಿಕ್ಕನಾಯಕನಹಳ್ಳಿ ತಾಲ್ಲೂಕು ನ್ಯಾಯಾಲಯ ಆವರಣದಲ್ಲಿ ಪರಿಸರ ದಿನದ ಅಂಗವಾಗಿ ಸಸಿ ನೆಡಲಾಯಿತು   

ಚಿಕ್ಕನಾಯಕನಹಳ್ಳಿ: ಪ್ರಕೃತಿಯನ್ನ ಕಾಪಾಡುವುದು ಎಲ್ಲರ ಜವಾಬ್ದಾರಿ. ಬೇಸಿಗೆಯಲ್ಲಿ ಗುಡ್ಡಕ್ಕೆ ಬೆಂಕಿ ಹಚ್ಚುವ ವ್ಯಕ್ತಿಗಳನ್ನ ಹಿಡಿದು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಧೀಶ ಎಸ್.ಟಿ.ಸತೀಶ್ ಸೂಚಿಸಿದರು.

ಪಟ್ಟಣದ ನ್ಯಾಯಾಲ ಆವರಣದಲ್ಲಿ ಶುಕ್ರವಾರ ಅರಣ್ಯ ಇಲಾಖೆ, ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದಿಂದ ನಡೆದ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.

ನ್ಯಾಯಾಲಯದ ಸಿಬ್ಬಂದಿಯೊಂದಿಗೆ ‘ಮುಂಜಾನೆ ಅರೆ ಮಲೆನಾಡು’ ಎಂದು ಹೆಸರುವಾಸಿಯಾಗಿರುವ ಪಟ್ಟಣದ ಮಾದಲಿಂಗನ ಕಣಿವೆ ಗುಡ್ಡಕ್ಕೆ ತೆರಳಿ ಪ್ರಕೃತಿಯ ವಿಹಂಗಮ ನೋಟ ಸವಿಯಲು ಹೋಗಿದ್ದೆವು. ಒಂದು ಭಾಗದಲ್ಲಿ ಬೆಂಕಿಯಿಂದ ಗಿಡ ಮರ ಹೊತ್ತಿ ಉರಿಯುತ್ತಿದ್ದವು. ಅದು ಬೇಸಿಗೆ ಸಮಯವಾಗಿದ್ದು ಕೆಲವು ಕಿಡಿಗೇಡಿಗಳು ಗುಡ್ಡಕ್ಕೆ ಬೆಂಕಿ ಹಚ್ಚಿದ್ದಾರೆಂದು ತಿಳಿಯಿತು. ಇದರಿಂದ ಪ್ರಾಣಿ ಪಕ್ಷಿ, ವನ್ಯಜೀವಿಗಳು ನಾಶವಾಗುತ್ತವೆ. ಮನುಷ್ಯನಿಗೆ ಪ್ರಕೃತಿಯನ್ನ ಸೃಷ್ಟಿಸಲು ಸಾದ್ಯವಿಲ್ಲ ಆದರೆ ಇರುವುದನ್ನ ಕಾಪಾಡಬೇಕು ಎಂದರು.

ADVERTISEMENT

ಅರಣ್ಯ ಇಲಾಖೆ ಅಧಿಕಾರಿ ಎಚ್.ಕೆ. ಅಮಿತ್ ಮಾತನಾಡಿ, ಪರಿಸದಲ್ಲಿ ಗಿಡ ಮರಗಳಿಂದ ಉತ್ತಮ ಗಾಳಿ ಹಾಗೂ ಆರೋಗ್ಯ ಲಭಿಸುತ್ತದೆ. ಪ್ಲಾಸ್ಟಿಕ್ ಬಳಕೆ ಸಮಾಜದಲ್ಲಿ ಹೆಚ್ಚಾಗಿದೆ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಹೇಳಿದರು.

ವಕೀಲರ ಸಂಘದ ಅದ್ಯಕ್ಷ ಜ್ಞಾನಮೂರ್ತಿ ಮಾತನಾಡಿ, ಭೂಮಿ ಹಾಗೂ ಸೂರ್ಯನ ಮದ್ಯ ಓಝೋನ್‌ ಪದರ ಇದೆ. ಅದು ಮಾಲಿನ್ಯಗಳಿಂದ ರಂಧ್ರವಾಗಿ ಭೂಮಿಯಲ್ಲಿ ಉಷ್ಣತೆ ಹೆಚ್ಚಾಗುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ ಎಂದರು.

ನ್ಯಾಯಾಧೀಶ ಆರ್.ಅಪರ್ಣ, ಉಪ ವಲಯ ಅರಣ್ಯಾಧಿಕಾರಿಗಳಾದ ಟಿ.ಡಿ.ಗೌರಿಶಂಕರ, ಕೆ. ಮಂಜುನಾಥ್, ವಕೀಲರ ಸಂಘದ ಉಪಾಧ್ಯಕ್ಷ ಪ್ರಶಾಂತ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಬಸವರಾಜ ಕಾಂತಿಮಠ, ಚಿತ್ರಗಾರ ವಿಜಯಲಕ್ಷ್ಮೀ ರಂಗನಾಥಪ್ಪ, ವಕೀಲರ ಸಂಘದ ಕಾರ್ಯದರ್ಶಿ, ಎಂ.ಎಸ್.ರಮೇಶ್, ನೋಟರಿ ಕೆ.ಆರ್. ಚೆನ್ನಬಸಪ್ಪ, ನೇತ್ರಾವತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.