ತುಮಕೂರು: ಯುಗಾದಿ ಹಬ್ಬದ ಪ್ರಯುಕ್ತ ಜಿಲ್ಲೆಯ ವಿವಿಧೆಡೆಗಳಲ್ಲಿ ಜೂಜಾಟದಲ್ಲಿ ತೊಡಗಿಸಿಕೊಂಡಿದ್ದ 291 ಜನರನ್ನು ಬಂಧಿಸಿ, 53 ಪ್ರಕರಣ ದಾಖಲಿಸಲಾಗಿದೆ. ₹3.21 ಲಕ್ಷ ವಶಕ್ಕೆ ಪಡೆಯಲಾಗಿದೆ.
ಮಂಗಳವಾರ ಮತ್ತು ಬುಧವಾರ ಜಿಲ್ಲೆಯ ವಿವಿಧೆಡೆ ಜೂಜು ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ತುಮಕೂರು ನಗರ ಉಪ ವಿಭಾಗದಲ್ಲಿ 15 ಪ್ರಕರಣ ದಾಖಲಿಸಿ 77 ಜನ, ತಿಪಟೂರು ವ್ಯಾಪ್ತಿಯಲ್ಲಿ 11 ಪ್ರಕರಣದಲ್ಲಿ 63 ಮಂದಿ, ಶಿರಾ ವ್ಯಾಪ್ತಿ 20 ಪ್ರಕರಣದಲ್ಲಿ 108 ಜನ, ಮಧುಗಿರಿ ಉಪ ವಿಭಾಗದಲ್ಲಿ 7 ಪ್ರಕರಣ ದಾಖಲಿಸಿ 43 ಜನರನ್ನು ದಸ್ತಗಿರಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.