ADVERTISEMENT

ತಿಪಟೂರು: ಬೀದಿ ನಾಯಿಗಳ ದಾಳಿಗೆ 6 ವರ್ಷದ ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 24 ಮೇ 2025, 16:10 IST
Last Updated 24 ಮೇ 2025, 16:10 IST
ನವ್ಯಾ
ನವ್ಯಾ   

ತಿಪಟೂರು: ತಾಲ್ಲೂಕಿನ ಅಯ್ಯನಬಾವಿ ಭೋವಿ ಕಾಲೊನಿಯಲ್ಲಿ ಬಾಲಕಿಯೊಬ್ಬಳ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ್ದು, ಬಾಲಕಿ ನವ್ಯಾ (6) ಮೃತಪಟ್ಟಿದ್ದಾಳೆ.

ಶನಿವಾರ ಸಂಜೆ 4ಗಂಟೆ ಸಮಯದಲ್ಲಿ ಬಾಲಕಿ ಬೀದಿಯಲ್ಲಿ ಆಟವಾಡುವಾಗ ಏಕಾಏಕಿ ದಾಳಿ ನಡೆಸಿದ ಐದು ನಾಯಿಗಳ ಹಿಂಡು, ತಲೆ ಹಾಗೂ ಹೊಟ್ಟೆ ಭಾಗವನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ. ತಲೆ ಚರ್ಮ ಸಂಪೂರ್ಣವಾಗಿ ಕಿತ್ತು ಬಂದಿದೆ. ಹೊಟ್ಟೆ ಭಾಗ ಕಿತ್ತು ಕರುಳು ಆಚೆ ಬಂದಿದೆ. ಕೈ, ಕಾಲು ತೊಡೆ ಭಾಗದಲ್ಲೂ ತೀವ್ರ ಗಾಯಗಳಾಗಿವೆ.

ರಕ್ತದ ಮಡುವಿನಲ್ಲಿದ್ದ ಬಾಲಕಿಯನ್ನು ಕಂಡ ಸಾರ್ವಜನಿಕರು ನಾಯಿಗಳನ್ನು ಓಡಿಸಿ ಹಾಸನ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ADVERTISEMENT

ಪೋಷಕರ ಆಕ್ರಂದನ: ಕಣ್ಣ ಮುಂದೆ ಆಟವಾಡಿಕೊಂಡಿದ್ದ ಮಗು ಮೃತಪ್ಟಿದ್ದನ್ನು ಕಂಡ ಪೋಷಕರ ದುಃಖ ಮುಗಿಲು ಮುಟ್ಟಿತ್ತು. ಬಾಲಕಿ ತಂದೆ ಮಹಲಿಂಗಯ್ಯ ಕಾಲು ಮುರಿದುಕೊಂಡಿದ್ದು, ಕಿವಿಯೂ ಕೇಳುವುದಿಲ್ಲ. ತಾಯಿ ಭಾಗ್ಯಮ್ಮಗೆ ಸಹ ಕಿವಿ ಕೇಳುವುದಿಲ್ಲ. ದಂಪತಿಯ ಇಬ್ಬರು ಮಕ್ಕಳಲ್ಲಿ ನವ್ಯಾ ಎರಡನೇಯವಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.