ADVERTISEMENT

ಕ್ರೀಡಾಕೂಟದಲ್ಲಿ ಮಿಂಚಿದ ಬಾಲಕಿಯರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 5:06 IST
Last Updated 28 ಸೆಪ್ಟೆಂಬರ್ 2022, 5:06 IST
ತುಮಕೂರಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ಸ್ಪರ್ಧೆ ನಡೆಯಿತು(ಎಡಚಿತ್ರ). ಜಾವೆಲಿನ್‌ ಎಸೆತ ಸ್ಪರ್ಧೆಯ ನೋಟ(ಮಧ್ಯದ ಚಿತ್ರ). ಹ್ಯಾಮರ್‌ ಎಸೆತ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳು
ತುಮಕೂರಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ಸ್ಪರ್ಧೆ ನಡೆಯಿತು(ಎಡಚಿತ್ರ). ಜಾವೆಲಿನ್‌ ಎಸೆತ ಸ್ಪರ್ಧೆಯ ನೋಟ(ಮಧ್ಯದ ಚಿತ್ರ). ಹ್ಯಾಮರ್‌ ಎಸೆತ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳು   

ತುಮಕೂರು:ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಎರಡನೇ ದಿನವಾದ ಮಂಗಳವಾರ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ವಿವಿಧ ಸ್ಪರ್ಧೆಗಳಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರ
ವಿವರ.

400 ಮೀಟರ್ ಓಟ (ಬಾಲಕರ ವಿಭಾಗ): ತುರುವೇಕೆರೆ ಅಭಿಷೇಕ್, ತುಮಕೂರಿನ ಆಂಜನೇಯ, ಚಿಕ್ಕನಾಯಕನಹಳ್ಳಿ ಮನು. 1,500 ಮೀಟರ್: ಕುಣಿಗಲ್‌ ವೈ.ಎಂ.ನರಸಿಂಹಮೂರ್ತಿ, ತುಮಕೂರಿನ ನಾಗರಾಜು, ತುರುವೇಕೆರೆ ಅಭಿಷೇಕ್. ಶಾಟ್‌ಫುಟ್ ಎಸೆತ: ತುಮಕೂರಿನ ಟಿ.ಎಂ.ದೀಕ್ಷಿತ್, ಪಾವಗಡ ಸಾಯಿನಾಯಕ್, ಕೊರಟಗೆರೆ ಚೇತನ್. ಜಾವೇಲಿನ್ ಎಸೆತ: ತುರುವೇಕೆರೆ ಎಚ್.ಪಿ.ಆಕಾಶ್, ಮಧುಗಿರಿ ಎನ್.ಬಿ.ಕೃಷ್ಣ, ಕೊರಟಗೆರೆ ಶ್ರೀಧರ್. ಹ್ಯಾಮರ್ ಎಸೆತ: ಶಿರಾದ ಶ್ರೀನಿವಾಸ್, ಕೊರಟಗೆರೆ ಶ್ರೀಧರ್, ತುರುವೇಕೆರೆ ಪ್ರಜ್ವಲ್. 5 ಸಾವಿರ ಮೀಟರ್ ನಡಿಗೆ: ತುಮಕೂರಿ‌ನ ಎಂ.ಎ.ಅಭಿಷೇಕ್, ಆರ್.ರವಿಶಂಕರ್, ತಿಪಟೂರಿನ ಜಿ.ಎಸ್.ಪುನೀತ್.

ADVERTISEMENT

ಉದ್ದ ಜಿಗಿತ: ತುಮಕೂರಿನ ಸುಹೈಲ್, ಗುಬ್ಬಿಯ ಆರ್.ನಂದನ್‌ ಪವನ್, ತಿಪಟೂರಿನ ಶಶಿಕುಮಾರ್.ತ್ರಿಬಲ್ ಜಂಪ್: ಗುಬ್ಬಿಯ ಆರ್.ಪವನ್, ತುಮಕೂರಿನ ಸುಹೈಲ್, ಪ್ರಜ್ವಲ್. ಎತ್ತರ ಜಿಗಿತ: ಚಿಕ್ಕನಾಯಕನಹಳ್ಳಿ ಆರ್.ಅಭಿ, ಕೊರಟಗೆರೆಯ ಜಿ.ಎನ್.ರಾಜೇಶ್, ಗುಬ್ಬಿಯ ಆರ್.ಪವನ್ ತೃತೀಯ ಬಹುಮಾನ ಪಡೆದರು.

4X100 ಮೀಟರ್‌ ರಿಲೇಯಲ್ಲಿ ಕುಣಿಗಲ್ ತಂಡ ಪ್ರಥಮ ಸ್ಥಾನ ಪಡೆದರೆ, ತುಮಕೂರು ಎರಡನೇ ಬಹುಮಾನ ತನ್ನದಾಗಿಸಿಕೊಂಡಿತು.

400 ಮೀಟರ್ (ಬಾಲಕಿಯರ ವಿಭಾಗ): ತುರುವೇಕೆರೆ ಎಚ್.ಎಂ.ಮಾನಸ, ತಿಪಟೂರು ಎಂ.ವರ್ಷಿಣಿ, ಗುಬ್ಬಿ ಕೆ.ಪುಷ್ಪಾ. 1,500 ಮೀಟರ್: ಪಾವಗಡ ಪಿ.ಲಹರಿ, ತುಮಕೂರಿನ ಎಂ.ಮಾಲ, ಶಿರಾದ ಕೆ.ಜೆ.ಮಹಾಲಕ್ಷ್ಮಿ. ಶಾಟ್‌ಫುಟ್ ಎಸೆತ: ತುಮಕೂರಿನ ಎಸ್.ಟಿ.ರಕ್ಷಿತಾ, ತುರುವೇಕೆರೆ ಜಿ.ಮಾನಸ, ಕುಣಿಗಲ್‌ನ ತನುಶ್ರೀ.

ಉದ್ದ ಜಿಗಿತ, ತ್ರಿಬಲ್ ಜಂಪ್ ವಿಭಾಗದಲ್ಲಿ ಚಿಕ್ಕನಾಯಕನಹಳ್ಳಿಯ ಎನ್.ಟಿ.ಭಾವನಾ ಪ್ರಥಮ ಸ್ಥಾನ ಪಡೆದರು. ಉದ್ದ ಜಿಗಿತದಲ್ಲಿ ತುರುವೇಕೆರೆ ಪಾವನ (ದ್ವಿತೀಯ), ಕುಣಿಗಲ್‌ನ ತ್ರಿವೇಣಿ ತೃತೀಯ ಹಾಗೂ ತ್ರಿಬಲ್ ಜಂಪ್‌ನಲ್ಲಿ ಯಶಸ್ವಿನಿ ದ್ವಿತೀಯ, ಗುಬ್ಬಿ ಕಲ್ಯಾಣಿ ತೃತೀಯ ಸ್ಥಾನ ಗಿಟ್ಟಿಸಿಕೊಂಡರು.

3 ಸಾವಿರ ಮೀಟರ್ ನಡಿಗೆ, ಎತ್ತರ ಜಿಗಿತದಲ್ಲಿ ತುರುವೇಕೆರೆ ಎಚ್.ಎಂ.ಮಾನಸ ಮೊದಲ ಸ್ಥಾನ ಪಡೆದರು. 3 ಸಾವಿರ ಮೀಟರ್ ನಡಿಗೆಯಲ್ಲಿ ತುರುವೇಕೆರೆ ಜೆ.ಬಿಂದು ದ್ವಿತೀಯ, ಕುಣಿಗಲ್‌ ಬಿಂದು ತೃತೀಯ,ಎತ್ತರ ಜಿಗಿತದಲ್ಲಿ ತುರುವೇಕೆರೆ ಕುಶಾಲ ದ್ವಿತೀಯ, ಕುಣಿಗಲ್‌ನ ಲಿಖಿತ ತೃತೀಯ ಬಹುಮಾನ ಪಡೆದರು.

ಹ್ಯಾಮರ್ ಎಸೆತದಲ್ಲಿ ತುರುವೇಕೆರೆಯ ಟಿ.ಎಸ್.ರಾಣಿ ಪ್ರಥಮ, ತಿಪಟೂರಿನ ಎ.ಎಸ್.ವರ್ಷ ದ್ವಿತೀಯ, ತುರುವೇಕೆರೆ ಎಚ್.ಆರ್.ಮೇಘಾ ತೃತೀಯ ಸ್ಥಾನ ಪಡೆದುಕೊಂಡರು. 4X100 ಮೀಟರ್‌ ರಿಲೇಯಲ್ಲಿ ತುರುವೇಕೆರೆ ಪ್ರಥಮ, ಗುಬ್ಬಿ ದ್ವಿತೀಯ ಬಹುಮಾನಕ್ಕೆ
ಪಾತ್ರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.