ADVERTISEMENT

ಶಿರಾ | ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆದ ಸರ್ಕಾರಿ ಶಾಲೆ

ಎಚ್.ಸಿ.ಅನಂತರಾಮು
Published 4 ಸೆಪ್ಟೆಂಬರ್ 2023, 13:33 IST
Last Updated 4 ಸೆಪ್ಟೆಂಬರ್ 2023, 13:33 IST
<div class="paragraphs"><p>ಶಿರಾ ತಾಲ್ಲೂಕಿನ ದೇವರಹಳ್ಳಿ ಸರ್ಕಾರಿ‌ ಕಿರಿಯ ಪ್ರಾಥಮಿಕ ಶಾಲೆ </p></div>

ಶಿರಾ ತಾಲ್ಲೂಕಿನ ದೇವರಹಳ್ಳಿ ಸರ್ಕಾರಿ‌ ಕಿರಿಯ ಪ್ರಾಥಮಿಕ ಶಾಲೆ

   

ಶಿರಾ: ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿ ದೇವನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ‌ ಶಾಲೆಯನ್ನು ದಾನಿಗಳ ನೆರವಿನಿಂದ ಮಾದರಿ ಶಾಲೆಯನ್ನಾಗಿ ರೂಪಿಸಲಾಗಿದೆ.

ಶಿಕ್ಷಕರು ಮನಸ್ಸು ಮಾಡಿದರೆ ಖಾಸಗಿ ಶಾಲೆಯನ್ನು ಮೀರಿಸುವಂತೆ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಬಹುದು ಎನ್ನುವುದಕ್ಕೆ ಈ ಶಾಲೆಯೇ ಉದಾಹರಣೆ.

ADVERTISEMENT

ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 32 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಖಾಸಗಿ ಶಾಲೆಗಳ ವ್ಯಾಮೋಹ ನಡುವೆಯೂ ಈ ಗ್ರಾಮದ ವಿದ್ಯಾರ್ಥಿಗಳು ಖಾಸಗಿ ಶಾಲೆ ಕಡೆ ಮುಖ‌ ಮಾಡದೆ ಸರ್ಕಾರಿ ಶಾಲೆಗೆ ದಾಖಲಾಗುತ್ತಿರುವುದು ವಿಶೇಷ.

ದಂಪತಿ ಶಿಕ್ಷಕರು

ಶಾಲೆ ಮುಖ್ಯ ಶಿಕ್ಷಕ ರಾಜಣ್ಣ 15ವರ್ಷದಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಸಹ ಶಿಕ್ಷಕಿ ಶಿವಮ್ಮ 22 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಶಿಕ್ಷಕರು ದಂಪತಿ. ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ನೀಡದೆ ತಮ್ಮ ಸ್ವಂತ ಮನೆ ಎನ್ನುವಂತೆ ಶಾಲೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ಶಾಲೆ ಒಳಗೆ ಕಾಲಿಡುತ್ತಿದ್ದಂತೆ ಆವರಣದಲ್ಲಿರುವ ಕೈತೋಟ ಗಮನ ಸೆಳೆಯುತ್ತದೆ. ಬಿಸಿಯೂಟಕ್ಕೆ ಬೇಕಾದ ತರಕಾರಿ, ಸೊಪ್ಪು ಬೆಳೆಯುವುದರ ಜತೆಗೆ ತೆಂಗು, ಅಡಿಕೆ, ಬಾಳೆ, ನುಗ್ಗೆ, ನಿಂಬೆ, ಬೆಟ್ಟದ ನೆಲ್ಲಿ, ಸೀಬೆ, ನೇರಳೆ, ಹಲಸು, ಟೀಕ್, ಸಿಲ್ವರ್, ಪಪ್ಪಾಯಿ, ಕರಿಬೇವಿನ ಮರಗಳು ಸ್ವಾಗತ ನೀಡುತ್ತವೆ. ವ್ಯವಸಾಯದ ಬಗ್ಗೆ ಮಕ್ಕಳಲ್ಲಿ ಕುತೂಹಲ ಮೂಡಿಸುವ ಜತೆಗೆ ವಿವಿಧ ಮರಗಳನ್ನು ಮಕ್ಕಳಿಗೆ ಪ್ರಾಯೋಗಿಕವಾಗಿ ತೋರಿಸುವ ಕೆಲಸ ಮಾಡಲಾಗುತ್ತಿದೆ.

ಸುಸಜ್ಜಿತವಾದ ಅಡುಗೆ ಕೊಠಡಿ, ಶೌಚಾಲಯ ಇದೆ. ಸುಂದರವಾದ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕಲಿಕೆಗೆ ಸುಂದರ ಪರಿಸರ ನಿರ್ಮಿಸಲಾಗಿದೆ. ನಲಿ ಕಲಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಮಕ್ಕಳಿಗೆ ಬೋಧನೆ ಮಾಡುತ್ತಿರುವುದು ವಿಶೇಷ.

ದಾನಿಗಳ ನೆರವಿನಿಂದ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಟಿ.ವಿ ಕೂಡ ಶಾಲೆಯಲ್ಲಿದೆ. ಕಳೆದ ವರ್ಷ ಕಂಪ್ಯೂಟರ್ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬಗ್ಗೆ ಮಾಹಿತಿ ಶಿಕ್ಷಣ ನೀಡಲಾಗಿದ. ಪ್ರತಿ ವರ್ಷ 3ರಿಂದ 4 ಮಂದಿ ವಿದ್ಯಾರ್ಥಿಗಳು ವಸತಿ ಶಾಲೆಗೆ ಆಯ್ಕೆಯಾಗುತ್ತಿರುವುದು ಈ ಶಾಲೆ ಹೆಗ್ಗಳಿಕೆ. 

ಶಿರಾ ತಾಲ್ಲೂಕಿನ ದೇವರಹಳ್ಳಿ ಗ್ರಾಮದ ಸರ್ಕಾರಿ‌ ಕಿರಿಯ ಪ್ರಾಥಮಿಕ ಶಾಲೆ.
ಶಾಲೆಯ ಆವರಣದಲ್ಲಿರುವ ಬೆಳೆಸಿರುವ ವಿವಿಧ ರೀತಿಯ ಗಿಡಗಳು
ಶಾಲೆಯ ಸಹ ಶಿಕ್ಷಕಿ ಶಿವಮ್ಮ ವಿದ್ಯಾರ್ಥಿಗಳ ಜೊತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.