ಕೊಡಿಗೇನಹಳ್ಳಿ: ಪುರವರ ಹೋಬಳಿಯ ಕೊಂಡವಾಡಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷೆಯಾಗಿ ಫಾಜಿಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಪ್ಪಂದದಂತೆ ತೆರವಾಗಿದ್ದ ಸ್ಥಾನಕ್ಕೆ ಫಾಜಿಲ್ ಎಂಬುವರನ್ನು ಬಿಜೆಪಿ ಮುಖಂಡ ಗಿರೇಗೌಡನಹಳ್ಳಿ ಕೃಷ್ಣಮೂರ್ತಿ ಅವರ ನಿರ್ದೇಶನದಂತೆ ಮೂರು ಪಕ್ಷದವರು ಸೇರಿ ಅವಿರೋಧವಾಗಿ ಆಯ್ಕೆ ಮಾಡಿದರು.
ಚುನಾವಣಾಧಿಕಾರಿಯಾಗಿ ರಮೇಶ್ ಕರ್ತವ್ಯ ನಿರ್ವಹಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಜಿ. ನಾಗರಾಜು. ಸದಸ್ಯರಾದ ಸಾಕಮ್ಮ, ಲಕ್ಷ್ಮಿಪತಿ, ಲಕ್ಷ್ಮೀದೇವಮ್ಮ, ಮಲ್ಲಮ್ಮ ಕೆ. ಅನ್ನಪೂರ್ಣ, ಕೆ.ಎಸ್. ಭವ್ಯಾ, ಶಂಕರಪ್ಪ, ರಾಘವೇಂದ್ರ ವಿನಯ್ ಕುಮಾರ್, ಮುದ್ದರಂಗಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.