ADVERTISEMENT

ಗುಬ್ಬಿ: ಬಿಲ್ವಪತ್ರೆ, ಮುತ್ತುಗ ಹೂವಿನ ಅಲಂಕಾರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 6:43 IST
Last Updated 16 ಫೆಬ್ರುವರಿ 2026, 6:43 IST
<div class="paragraphs"><p>ಗುಬ್ಬಿ ಚನ್ನಬಸವೇಶ್ವರ ಮೂರ್ತಿಗೆ ರುದ್ರಾಕ್ಷಿ, ವಿಭೂತಿ, ಮುತ್ತುಗ ಹೂವಿನ ಅಲಂಕಾರ&nbsp;</p></div>

ಗುಬ್ಬಿ ಚನ್ನಬಸವೇಶ್ವರ ಮೂರ್ತಿಗೆ ರುದ್ರಾಕ್ಷಿ, ವಿಭೂತಿ, ಮುತ್ತುಗ ಹೂವಿನ ಅಲಂಕಾರ 

   

ಗುಬ್ಬಿ: ತಾಲ್ಲೂಕಿನಾದ್ಯಂತ ಭಾನುವಾರ ಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಶಿವಲಿಂಗಕ್ಕೆ ವಿಶೇಷ ಅಭಿಷೇಕ, ಅರ್ಚನೆ ನಡೆಯಿತು. ಅಭಿಷೇಕದ ನಂತರ ಬಿಲ್ವಪತ್ರೆ, ಮುತ್ತುಗದ ಹೂಗಳಿಂದ ಶಿವಲಿಂಗನವನ್ನು ಅಲಂಕಾರ ಮಾಡಲಾಗಿತ್ತು.

ADVERTISEMENT

ನಿಟ್ಟೂರಿನ ಕಲ್ಲೇಶ್ವರ ಸ್ವಾಮಿ, ಗುಹೇಶ್ವರ ಸ್ವಾಮಿ, ಹೊಸಕೆರೆ ಚಂದ್ರಮೌಳೇಶ್ವರ ಹಾಗೂ ದೊಡ್ಡ ಈಶ್ವರ ದೇವಾಲಯ, ಚೇಳೂರಿನ ದುಷ್ಟೇಶ್ವರ ದೇವಾಲಯ, ಸಿಎಸ್ ಪುರ ಮತ್ತು ಕಡಬದ ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ರಥೋತ್ಸವ ನಡೆಯಿತು.

ಬೆಳಿಗ್ಗೆಯಿಂದಲೇ ಜನರು ಮುತ್ತುಗದ ಹೂವು, ಬಿಲ್ವಪತ್ರೆ, ಬನ್ನಿಪತ್ರೆ, ತುಂಬೆ ಹೂವು, ಗರಿಕೆ ತಂದು ಮನೆಗಳಲ್ಲಿ ಪೂಜಿಸಿದ ನಂತರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಚನ್ನಬಸವೇಶ್ವರ ಮೂರ್ತಿಗೆ ಬೆಳಗಿನ ಅಭಿಷೇಕದ ನಂತರ ರುದ್ರಾಕ್ಷಿ, ವಿಭೂತಿ, ಸ್ಪಟಿಕ, ಮುತ್ತುಗ, ಬಿಲ್ವಪತ್ರೆ, ತುಂಬೆ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಹಲವೆಡೆ ರುದ್ರಾಕ್ಷಿ ನೀಡಲಾಯಿತು. ರಾತ್ರಿ ಜಾಗರಣೆ ಅಂಗವಾಗಿ ಶಿವಾಲಯಗಳಲ್ಲಿ ಭಜನಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.