ADVERTISEMENT

ಸ್ವಾಮೀಜಿಗಳಿಗೆ ಜನರೇ ಹೊಡೆಯುತ್ತಾರೆ: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 2:53 IST
Last Updated 10 ಏಪ್ರಿಲ್ 2022, 2:53 IST
ಎಸ್‌.ಆರ್‌.ಶ್ರೀನಿವಾಸ್‌
ಎಸ್‌.ಆರ್‌.ಶ್ರೀನಿವಾಸ್‌   

ತುಮಕೂರು: ‘ಕೆಲವು ಸ್ವಾಮೀಜಿಗಳನ್ನು ಕರೆದುಕೊಂಡು ಬಂದು ಪ್ರಚೋದನಕಾರಿ ಹೇಳಿಕೆ ಕೊಡಿಸಲಾಗುತ್ತಿದೆ. ಇಂಥ ಸ್ವಾಮಿಗಳಿಗೆ ಜನರೇ ಬುದ್ಧಿ ಕಲಿಸುತ್ತಾರೆ’ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಶನಿವಾರ ವಾಗ್ದಾಳಿ ನಡೆಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಜಾಬ್‌, ಹಲಾಲ್ ಕಟ್, ಜಟ್ಕಾ ಕಟ್‌ ವಿವಾದ ಅನಗತ್ಯ. ಆದರೆ, ಬೆಲೆ ಏರಿಕೆ ವಿಚಾರ ಮರೆಮಾಚಲು ಇಂತಹ ಭಾವನಾತ್ಮಕ ವಿಚಾರಗಳನ್ನು ತಂದು ಜನರ ದಿಕ್ಕುತಪ್ಪಿಸಲಾಗುತ್ತಿದೆ. ಕೆಲ ಸ್ವಾಮಿಗಳನ್ನು ಕರೆತಂದು ಪ್ರಚೋದನಾತ್ಮಕ ಹೇಳಿಕೆ ಕೊಡಿಸಲಾಗುತ್ತಿದೆ’ ಎಂದು ಟೀಕಿಸಿದರು.

‘ಧಾರ್ಮಿಕ ಕೇಂದ್ರಗಳಿಗೆ ಮುಸ್ಲಿಂ ಚಾಲಕರನ್ನು ಕರೆದುಕೊಂಡು ಹೋಗಬೇಡಿ ಎಂದು ಯಾರೊ ಒಬ್ಬರು ಸ್ವಾಮೀಜಿ ಹೇಳಿದ್ದಾರೆ. ಈ ಸ್ವಾಮಿ ಬಂದು ಚಾಲಕನ ಕೆಲಸ ಮಾಡುತ್ತಾರಾ? ಕಾವಿ ಬಟ್ಟೆ ತೊಟ್ಟವರು ಅವರ ಕೆಲಸ ಮಾಡಬೇಕು. ಇಲ್ಲವಾದರೆ ಕಾವಿ ಬಿಚ್ಚಿ, ಖಾಕಿ ಹಾಕಿಕೊಳ್ಳಲಿ. ಇಂಥ ಸ್ವಾಮೀಜಿಗಳಿಂದ ನಮಗೆ ಏನು ಸಂದೇಶ ಸಿಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.