ADVERTISEMENT

ಮುಕ್ತಿ ಮಾರ್ಗ ಕಲಿಸುವವನೇ ಗುರು : ಶಾಸಕ ಬಿ.ಸಿ.ನಾಗೇಶ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 3:13 IST
Last Updated 6 ಸೆಪ್ಟೆಂಬರ್ 2020, 3:13 IST
ತಿಪಟೂರಿನಲ್ಲಿ ಶಿಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಬಿ.ಸಿ. ನಾಗೇಶ್ ಉದ್ಘಾಟಿಸಿದರು
ತಿಪಟೂರಿನಲ್ಲಿ ಶಿಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಬಿ.ಸಿ. ನಾಗೇಶ್ ಉದ್ಘಾಟಿಸಿದರು   

ತಿಪಟೂರು: ವಿದ್ಯಾರ್ಥಿಗಳಿಗೆ ಮುಕ್ತಿಯ ಮಾರ್ಗ ಕಲಿಸುವವನು ಮಾತ್ರವೇ ಗುರುವಾಗುತ್ತಾನೆ ಎಂದು ಶಾಸಕ ಬಿ.ಸಿ.ನಾಗೇಶ್ ಹೇಳಿದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಮತ್ತು ಗುರುವಿನ ಸ್ಥಾನ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ನಂತರದಲ್ಲಿ ಮಹತ್ವ ಕಳೆದುಕೊಂಡಿದೆ. ಹಿಂದಿನ ಗುರುಗಳು ಮುಕ್ತಿಯ ಮಾರ್ಗ ಕಲಿಸುವ ಶಿಕ್ಷಣದ ವ್ಯವಸ್ಥೆ ರೂಪಿಸಿದ್ದರು. ಆಧುನಿಕ ಶಿಕ್ಷಣದಿಂದ ವಿದ್ಯಾರ್ಥಿಗಳ ಮನಸ್ಥಿತಿ ಬದಲಾಗಿದೆ. ಸಂಸ್ಕೃತಿ ಮಾಯವಾಗಿದೆ ಎಂದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿ, ‘ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಆದರ್ಶ ಶಿಕ್ಷಕರಾಗಬೇಕು. ಪ್ರತಿ ಮಗುವಿಗೂ ಉತ್ತಮ ವಿಚಾರ ತಲುಪಿಸಬೇಕು ಎಂದರು.

ಉಪವಿಭಾಗಾಧಿಕಾರಿ ದಿಗ್ವಿಜಯ ಬೋಡ್ಕೆ, ತಹಶೀಲ್ದಾರ್ ಆರ್.ಚಿ.ಚಂದ್ರಶೇಖರ್, ತಾ.ಪಂ.ಅಧ್ಯಕ್ಷ ಜಿ.ಎಸ್.ಶಿವಸ್ವಾಮಿ, ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಜಿ.ಪಂ. ಸದಸ್ಯರಾದ ಜಿ.ನಾರಾಯಣ್, ಭಾಗ್ಯಮ್ಮ ಗೋವಿಂದಪ್ಪ, ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಇ. ರಮೇಶ್, ಹರಿಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.