ADVERTISEMENT

ತುಮಕೂರು:ಕೂಲಿ ಹೆಚ್ಚಳಕ್ಕೆ ಹಮಾಲಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 3:54 IST
Last Updated 22 ಅಕ್ಟೋಬರ್ 2020, 3:54 IST
ಕೂಲಿ ಹೆಚ್ಚಳಕ್ಕೆ ಆಗ್ರಹಿಸಿ ಹಮಾಲಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿಪತ್ರ ಸಲ್ಲಿಸಿದರು
ಕೂಲಿ ಹೆಚ್ಚಳಕ್ಕೆ ಆಗ್ರಹಿಸಿ ಹಮಾಲಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿಪತ್ರ ಸಲ್ಲಿಸಿದರು   

ತುಮಕೂರು: ರಾಜ್ಯ ಆಹಾರ ನಿಗಮ (ಕೆಎಸ್‌ಎಫ್‌ಸಿ) ಉಗ್ರಾಣಗಳಲ್ಲಿ ಕೆಲಸ ಮಾಡುವ ಹಮಾಲಿಗಳಿಗೆ ನೀಡುತ್ತಿರುವ ಲೋಡ್, ಅನ್‌ಲೋಡ್ ಕೂಲಿ ಮೊತ್ತವನ್ನು ಹೆಚ್ಚಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಬೇಡಿಕೆ ಮನವಿಪತ್ರವನ್ನು ಸಲ್ಲಿಸಿದರು. ನಗರದ ಶಿರಾಗೇಟ್, ಹಂಚಿಹಳ್ಳಿಯಲ್ಲಿರುವ ಉಗ್ರಾಣಗಳಲ್ಲಿ ಕೆಲಸ ಮಾಡುತ್ತಿರುವ ಹಮಾಲಿಗಳಿಗೆ ಈ ಮೊದಲು ಒಂದು ಚೀಲಕ್ಕೆ ₹3.40 ನೀಡುತ್ತಿದ್ದರು. ಈಗ ಏಕಾಎಕಿ ₹2.70ಕ್ಕೆ ಇಳಿಸಿದ್ದಾರೆ. ದಿನವಿಡಿ ಮೈಬಗ್ಗಿಸಿ ದುಡಿದರೂ ಗುತ್ತಿಗೆದಾರರು ನೀಡುವ ಅತಿಕಡಿಮೆ ಕೂಲಿಯಿಂದ ಜೀವನ ಸಾಗಿಸುವುದು ಕಷ್ಟವಾಗಿದೆ ಎಂದು ದೂರಿದರು.

ರಾಜ್ಯದ ಇತರೆ ಆಹಾರ ನಿಗಮಗಳಲ್ಲಿ ಚೀಲಕ್ಕೆ ₹3.80ರಿಂದ ₹4 ನೀಡಲಾಗುತ್ತಿದೆ. ಹೆಚ್ಚು ಕೂಲಿ ಕೇಳಿದರೆ ಹೊರ ರಾಜ್ಯದಿಂದ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸುವುದಾಗಿ ಗುತ್ತಿಗೆದಾರರು ಬೆದರಿಕೆ ಹಾಕುತ್ತಿದ್ದಾರೆ. ಇಲ್ಲಿ ಮಾತ್ರ ಕಡಿಮೆ ಕಡಿಮೆ ಕೊಡಲಾಗುತ್ತಿದ್ದು, ಮೊದಲಿನಂತೆ ಕೂಲಿ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಕರುನಾಡ ವಿಜಯಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸೇನೆ ಪದಾಧಿಕಾರಿಗಳಾದ ಸುಧೀರ್, ಅನಿಲ್ ನಾಯಕ್, ಜಗದೀಶ್, ಎ.ಜಿ.ಹರೀಶ್, ರಂಗನಾಥ್ ಪ್ರಸಾದ್, ಶಿವಣ್ಣ, ಮುಕ್ತಿಯಾರ್, ಯಾಸ್ಮಿನ್ ತಾಜ್, ಮಂಜುಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.