ತುಮಕೂರು: 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ನಗರದ ನಿವಾಸಿ ಪೀರು ಎಂಬುವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಶಾಲೆಗೆ ಹೋಗುವಾಗ ಆರೋಪಿ ಬಾಲಕಿಯ ಹಿಂದೆ ಹೋಗುತ್ತಿದ್ದ. ಕೆಟ್ಟ ಉದ್ದೇಶದಿಂದ ನೋಡುತ್ತಿದ್ದ, ಚುಡಾಯಿಸಿ, ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಸೋಮವಾರ ರಾತ್ರಿ ಬಾಲಕಿಯು ತನ್ನ ಸ್ನೇಹಿತೆಯ ಮನೆಯಿಂದ ವಾಪಸ್ ಮನೆಗೆ ಹೋಗುವಾಗ ಆರೋಪಿ ಬಾಲಕಿಯನ್ನು ಎಳೆದಾಡಿ, ಲೈಂಗಿಕ ಕಿರುಕುಳ ನೀಡಿದ್ದ. ಬಾಲಕಿ ಆತನಿಂದ ತಪ್ಪಿಸಿಕೊಂಡು ಮನೆಗೆ ಹೋಗಿ ಪೋಷಕರಿಗೆ ತಿಳಿಸಿದ್ದಳು.
ಬಾಲಕಿಯ ತಾಯಿ ಮಹಿಳಾ ಠಾಣೆಗೆ ದೂರು ನೀಡಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.