ADVERTISEMENT

ಹೆಬ್ಬೂರು: ಅನುಮಾನ– ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 4:25 IST
Last Updated 28 ಫೆಬ್ರುವರಿ 2026, 4:25 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಹೆಬ್ಬೂರು: ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿಯ ದಾಸರಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆದ 20 ದಿನಗಳ ನಂತರ ಗುರುವಾರ ಪುರುಷನೊಬ್ಬನ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ದಾಸರಹಳ್ಳಿಯ ಕೆ.ಪರಮೇಶ್‌ (50) ಜ. 30ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಹೆಂಡತಿ ಆಶಾ ಫೆ. 19ರಂದು ಬೇರೆ ವ್ಯಕ್ತಿಯ ಜತೆಗೆ ಮದುವೆ ಮಾಡಿಕೊಂಡಿದ್ದರು. ಇದರಿಂದ ಅನುಮಾನ ವ್ಯಕ್ತಪಡಿಸಿದ ಪರಮೇಶ್‌ ಕುಟುಂಬಸ್ಥರು ಹೆಬ್ಬೂರು ಠಾಣೆಗೆ ದೂರು ನೀಡಿದ್ದು, ಮೃತದೇಹ ಹೊರ ತೆಗೆಯಲಾಯಿತು.

ADVERTISEMENT

‘ಮೃತದೇಹಕ್ಕೆ ಸ್ನಾನ ಮಾಡಿಸುವ ಸಮಯದಲ್ಲಿ ಮೂಗಿನ ಮೇಲೆ ತರಚಿದ ಗಾಯಗಳಿದ್ದವು, ಮೂಗು ಊದಿಕೊಂಡಿತ್ತು. ಅಂತ್ಯಕ್ರಿಯೆ ಸಮಯದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲು ಆಗಲಿಲ್ಲ. ಈಗ ಪರಮೇಶ್‌ ನಿಧನರಾದ ಕೆಲ ದಿನಗಳಲ್ಲೇ ಹೆಂಡತಿ ಮತ್ತೊಂದು ಮದುವೆ ಮಾಡಿಕೊಂಡಿದ್ದು, ಸಾವಿನ ಕುರಿತು ಅನುಮಾನ ಮೂಡಿಸಿದೆ’ ಎಂದು ಪರಮೇಶ್‌ ಅಕ್ಕ ನಾಗಮ್ಮ ನೀಡಿದ ದೂರಿನ ಮೇರೆಗೆ ಹೆಬ್ಬೂರು ಠಾಣೆಯಲ್ಲಿ ಯುಡಿಆರ್‌ ದಾಖಲಾಗಿದೆ.

‘ಮರಣೋತ್ತರ ಪರೀಕ್ಷೆಯ ವರದಿ ಬರಲು ಒಂದು ವಾರ ಬೇಕಾಗುತ್ತದೆ. ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.