ADVERTISEMENT

ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 12:57 IST
Last Updated 31 ಮಾರ್ಚ್ 2020, 12:57 IST
ಗುಬ್ಬಿ ಪಟ್ಟಣದ ನಿರ್ಗತಿಕ ಹಾಗೂ ಕೂಲಿ ಕಾರ್ಮಿಕರಿಗೆ ಅಧಿಕಾರಿಗಳು ಊಟ ಬಡಿಸಿದರು
ಗುಬ್ಬಿ ಪಟ್ಟಣದ ನಿರ್ಗತಿಕ ಹಾಗೂ ಕೂಲಿ ಕಾರ್ಮಿಕರಿಗೆ ಅಧಿಕಾರಿಗಳು ಊಟ ಬಡಿಸಿದರು   

ಗುಬ್ಬಿ: ನಗರದಲ್ಲಿನ ನಿರ್ಗತಿಕರು ಮತ್ತು ದೂರದ ಊರುಗಳಿಗೆ ತೆರಳಲು ಸಾಧ್ಯವಾಗದ ಕಾರ್ಮಿಕರು ಊಟ, ವಸತಿಯಿಲ್ಲದೆ ತಂತ್ರ ಸ್ಥಿತಿಗೆ ಸಿಲುಕಿ ಸಂಕಷ್ಟದಲ್ಲಿದ್ದಾರೆ. ಅಂತವರಿಗೆ ಸ್ಪಂದಿಸಿ ಎಂದು ತಹಶೀಲ್ದಾರ್ ತಿಪ್ಪೆಸ್ವಾಮಿ ಮನವಿ ಮಾಡಿದರು.

ಪಟ್ಟಣದಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ, ನೊಂದವರಿಗೆ ಊಟ ಬಡಿಸಿ ಮಾತನಾಡಿದರು.

ಅ.ನ.ಲಿಂಗಪ್ಪ ಮಾತನಾಡಿ, ಕೊರೊನಾ ಸೋಂಕು ಹರಡುವಿಕೆಯಿಂದ ಅನೇಕ ಕುಟುಂಬಗಳು ಅನ್ನ, ನೀರು, ವಸತಿ, ಬಟ್ಟೆಗೆ ಸಮಸ್ಯೆಯಾಗಿದೆ. ದಾನಿಗಳು ಮತ್ತು ಸಹೃದಯಿಗಳು ಅಂತವರಿಗೆ ತಮ್ಮ ಕೈಲಾದಷ್ಟು ಮಟ್ಟಿಗೆ ನೆರವು ನೀಡಿದಾಗ ಮಾತ್ರ ಮಾನವೀಯತೆಗೆ ಅರ್ಥ ಸಿಗುತ್ತದೆ ಎಂದು ಹೇಳಿದರು.

ADVERTISEMENT

ಕಂದಾಯ ನಿರೀಕ್ಷಕ ರಮೇಶ್ ಕುಮಾರ್, ಬಿಜೆಪಿ ಮುಖಂಡ ಜಿ.ಎನ್.ಬೆಟ್ಟಸ್ವಾಮಿ, ಎಚ್.ಎಲ್.ಬಸವರಾಜು, ಭೀಮ್ ಸೇನ್ ಶೆಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.