ADVERTISEMENT

ರಕ್ತದಾನದಿಂದ ಜೀವಕ್ಕೆ ‌ನೆರವು

ನಗರದ ರಮಣಮಹರ್ಷಿ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 13:59 IST
Last Updated 18 ಡಿಸೆಂಬರ್ 2018, 13:59 IST
ಶಿಬಿರದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು
ಶಿಬಿರದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು   

ತುಮಕೂರು: ಯುವ ಸಮೂಹ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವಕ್ಕೆ ನೆರವಾಗಬೇಕು ಎಂದು ಶ್ರೀದೇವಿ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಲಲಿತಾ ತಿಳಿಸಿದರು.

ನಗರದ ರಮಣ ಮಹರ್ಷಿ ನರ್ಸಿಂಗ್ ಕಾಲೇಜಿನಲ್ಲಿ ರಮಣ ಮಹರ್ಷಿ ಮತ್ತು ಶ್ರೀದೇವಿ ನರ್ಸಿಂಗ್ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಶ್ರೇಷ್ಠದಾನಗಳಲ್ಲಿ ರಕ್ತದಾನ ಮಹತ್ವದಾಗಿದೆ. ರಕ್ತದಾನದಿಂದ ಹಲವು ರೋಗಗಳಿಂದ ಮುಕ್ತರಾಗಿ ಸದೃಢ ದೇಹ ಪಡೆಯಲು ಸಾಧ್ಯ ಎಂದು ಹೇಳಿದರು.

ADVERTISEMENT

ರಮಣ ಮಹರ್ಷಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ದಯಾನಂದ್‌ ಮಾತನಾಡಿ, ’ಯುವ ಜನರು ಮತ್ತು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು. ಇದರಿಂದ ಹಲವು ರೋಗಿಗಳ ಜೀವ ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ರಕ್ತದಾನ ಮಾಡಬೇಕಾಗಿದೆ’ ಎಂದು ಮನವಿ ಮಾಡಿಕೊಂಡರು.

ಶ್ರೀದೇವಿ ಕಾಲೇಜಿನ ಆಡಳಿತಾಧಿಕಾರಿ ಟಿ.ವಿ.ಬ್ರಹ್ಮದೇವಯ್ಯ, ’ರಕ್ತದಾನ ಉತ್ತಮ ಆರೋಗ್ಯ ಪಡೆಯಬಹುದು. ಹಾಗೇ ಎಲ್ಲರೂ ರಕ್ತ ಪರೀಕ್ಷೆ ಮಾಡಿಸಿಕೊಂಡು ರಕ್ತದ ಗುಂಪನ್ನು ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರೊ.ಮುನಿಸ್ವಾಮಿ, ಡಾ.ಮನೋಜ್, ರಕ್ತನಿಧಿಯ ತಾಂತ್ರಿಕ ಮೇಲ್ವಿಚಾರಕ ಕೆ.ಲೂಕಸ್, ವ್ಯಾಲೆಂಟಿನಾ ಮೇರಿ, ಲೀನು, ಶರತ್, ರೈನ್ ಉಲ್ಲ, ರುಕ್ಸರ್ ಹಾಗೂ ರಾಹುಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.