ADVERTISEMENT

ಸಂಗೀತ, ನೃತ್ಯದ ಶಿಕ್ಷಕರನ್ನು ನೇಮಿಸಿ: ಶಾಸಕ ಎಂ.ವಿ.ವೀರಭದ್ರಯ್ಯ

ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ ಗಾನ ನಮನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 3:52 IST
Last Updated 26 ಸೆಪ್ಟೆಂಬರ್ 2021, 3:52 IST
ಮಧುಗಿರಿಯ ಕನ್ನಡ ಭವನದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ ನಡೆದ ಗಾನ ನಮನ ಕಾರ್ಯಕ್ರಮದಲ್ಲಿ ಜಿಕೆವಿಕೆ ವಿವಿಯಲ್ಲಿ ಬಿಎಸ್‌ಸಿ ಕೃಷಿ ಪದವಿಯಲ್ಲಿ 10 ಚಿನ್ನದ ಪದಕ ಪಡೆದ ಮೋನಿಕಾ ಅವರನ್ನು ಸನ್ಮಾನಿಸಲಾಯಿತು. ಶಾಸಕ ಎಂ.ವಿ.ವೀರಭದ್ರಯ್ಯ, ಕಾಂಗ್ರೆಸ್‌ ಮುಖಂಡ ಮುರುಳೀಧರ್ ಹಾಲಪ್ಪ ಇದ್ದರು
ಮಧುಗಿರಿಯ ಕನ್ನಡ ಭವನದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ ನಡೆದ ಗಾನ ನಮನ ಕಾರ್ಯಕ್ರಮದಲ್ಲಿ ಜಿಕೆವಿಕೆ ವಿವಿಯಲ್ಲಿ ಬಿಎಸ್‌ಸಿ ಕೃಷಿ ಪದವಿಯಲ್ಲಿ 10 ಚಿನ್ನದ ಪದಕ ಪಡೆದ ಮೋನಿಕಾ ಅವರನ್ನು ಸನ್ಮಾನಿಸಲಾಯಿತು. ಶಾಸಕ ಎಂ.ವಿ.ವೀರಭದ್ರಯ್ಯ, ಕಾಂಗ್ರೆಸ್‌ ಮುಖಂಡ ಮುರುಳೀಧರ್ ಹಾಲಪ್ಪ ಇದ್ದರು   

ಮಧುಗಿರಿ: ‘ಖ್ಯಾತ ಗಾಯಕ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು40 ಸಾವಿರ ಹಾಡುಗಳನ್ನು ಕೊಡುಗೆ ನೀಡಿದ್ದಾರೆ’ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಹೇಳಿದರು.

ಪಟ್ಟಣದ ಕನ್ನಡ ಭವನದಲ್ಲಿ ಕಲಾರಂಗ ಮತ್ತು ಲಾಲಿತ್ಯ ಸಂಗೀತ ಶಾಲೆ ಶನಿವಾರ ಆಯೋಜಿಸಿದ್ದ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸ್ಮರಣಾರ್ಥ ಗಾನ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಸ್‌ಪಿಬಿ ಅವರು ಅನೇಕ ಪ್ರಶಸ್ತಿಗಳನ್ನು ಪಡೆದ್ದಿದ್ದರೂ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ತಾಲ್ಲೂಕಿನ ಜನತೆ ಸಂಗೀತ ಪ್ರಿಯರು ಹಾಗೂ ಕಲಾ ರಸಿಕರಾಗಿದ್ದು, ಸಂಗೀತ ಕಲೆ ಹಾಗೂ ಸಾಹಿತ್ಯಕ್ಕೆ ಯಾವುದೇ ಕೊರತೆಯಿಲ್ಲ ಎಂದು ಹೇಳಿದರು.

ADVERTISEMENT

ಕನ್ನಡ ಭವನ ಉತ್ತಮ ಗಾಯಕರನ್ನು, ಕಲಾವಿದರನ್ನು ನಾಡಿಗೆ ನೀಡುವ ವೇದಿಕೆಯಾಗಲಿ. ಈ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯಲಿ. ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರುವಂತಾಗಲಿ
ಎಂದರು.

ಕೌಶಲಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ್ ಹಾಲಪ್ಪ ಮಾತನಾಡಿ, ಶಾಲೆಗಳಲ್ಲಿ ಸಂಗೀತ, ನೃತ್ಯ, ನಾಟಕ, ಕಲೆಯ ಶಿಕ್ಷಕರನ್ನು ರಾಜ್ಯ ಸರ್ಕಾರ ನೇಮಿಸಬೇಕು. ಪ್ರತಿಯೊಂದು ಪಂಚಾಯಿತಿ ಮಟ್ಟಕ್ಕೂ ಸಂಗೀತ ಮತ್ತು ಕಲೆ ವಿಸ್ತಾರವಾಗಬೇಕು ಎಂದು ಹೇಳಿದರು.

ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಆಡಳಿತಾಧಿಕಾರಿ ಎಂ.ವಿ.ಪಾತರಾಜು ಮಾತನಾಡಿ, ಸಂಗೀತ ಮತ್ತು ಕಲೆಯನ್ನು ಪ್ರತಿಯೊಬ್ಬರೂ ಉಳಿಸಿ ಬೆಳೆಸಬೇಕು. ಗಾಯಕ ಬಾಲಸುಬ್ರಹ್ಮಣ್ಯಂ ಅವರು ಕನ್ನಡ ಭಾಷೆ ಹಾಗೂ ಸಂಗೀತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಎಲ್ಲ ಸಮಸ್ಯೆಯನ್ನು ನಿವಾರಣೆ
ಮಾಡುವ ಶಕ್ತಿ ಶಿಕ್ಷಣಕ್ಕಿದೆ. ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು
ತಿಳಿಸಿದರು.

ಮಂಡ್ಯ ಜಿಕೆವಿಕೆ ವಿವಿಯಲ್ಲಿ ಬಿಎಸ್‌ಸಿ ಅಗ್ರಿಕಲ್ಚರ್‌ನಲ್ಲಿ 10 ಚಿನ್ನದ ಪದಕ ಗಳಿಸಿದ ತಾಲ್ಲೂಕು ಗೂಲಹಳ್ಳಿಯ ಮೋನಿಕಾ ಅವರನ್ನು ಸನ್ಮಾನಿಸಲಾಯಿತು. ಎಸ್‌‍ಪಿಬಿ ಗೀತೆಗಳನ್ನು ಹಾಡಲಾಯಿತು.

ಕಲಾರಂಗದ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಪುರಸಭೆ ಸದಸ್ಯರಾದ ಎಂ.ಎಸ್.ಚಂದ್ರಶೇಖರ್ ಬಾಬು, ಎಂ.ಎಲ್.ಗಂಗರಾಜು, ಸಂಗೀತ ಶಿಕ್ಷಕ ನಾಗರಾಜು, ಲಾಲಿತ್ಯ ಸಂಗೀತ ಶಾಲೆ ಕಾರ್ಯದರ್ಶಿ ಲಲಿತಾಂಭ ಲಕ್ಷ್ಮೀನರಸಯ್ಯ, ಕಸಾಪ ಪದಾಧಿಕಾರಿಗಳಾದ ಎಚ್.ಡಿ.ನರಸೇಗೌಡ, ಬಿ.ಜೆ.ಶಾಂತಮ್ಮ, ಕಲ್ಪನಾ ಗೋವಿಂದರಾಜು, ಗೀತಾ, ಹೇಮಾ, ನಾಗಲತಾ, ಮಂಜುಳಾ, ಟಿ.ಲಕ್ಷ್ಮೀನರಸಯ್ಯ, ನಿತಿನ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.