ADVERTISEMENT

ತುಮಕೂರು: ಹೋಂ ಕ್ವಾರಂಟೈನ್ ಪೂರ್ಣ

ಕೊರೊನಾ; 24 ದಿನಗಳಿಂದ ದಾಖಲಾಗದ ಹೊಸ ಪ್ರಕರಣಗಳು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 14:16 IST
Last Updated 22 ಏಪ್ರಿಲ್ 2020, 14:16 IST

ತುಮಕೂರು: ಜಿಲ್ಲೆಯಲ್ಲಿ 480 ಮಂದಿಯ ಹೋಂ ಕ್ವಾರಂಟೈನ್‌ ಅವಧಿ ಪೂರ್ಣವಾಗಿದೆ. ಈ ಮೂಲಕ ಜಿಲ್ಲೆ ವ್ಯಾಪ್ತಿಯಲ್ಲಿ ಕ್ವಾರಂಟೈನ್‌ನಲ್ಲಿದ್ದ ಎಲ್ಲರ ಅವಧಿಯೂ ಪೂರ್ಣವಾಗಿದೆ.

381 ಮಂದಿ ಐಸೊಲೇಷನ್‍ನಲ್ಲಿ ಇದ್ದಾರೆ. ಇಲ್ಲಿಯವರೆಗೆ 1,002 ಜನರ ಗಂಟಲುಸ್ರಾವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. 764 ಮಾದರಿಗಳು ನೆಗೆಟಿವ್ ಎಂದು ದೃಢಪಟ್ಟಿದೆ. 231 ತಪಾಸಣೆಯ ವರದಿ ಬಾಕಿ ಇದೆ.

ಮಾರ್ಚ್ 27 ಮತ್ತು 30ರಂದು ‌ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆ ಆಗಿದ್ದವು. ಅಲ್ಲಿಂದ ಇಲ್ಲಿಯವರೆಗೆ ಒಂದೂ ಪ್ರಕರಣಗಳು ಕಂಡು ಬಂದಿಲ್ಲ. ಇದು ಸಹಜವಾಗಿ ಜಿಲ್ಲೆಯ ಜನರಲ್ಲಿ ನಿರಾಳ ಭಾವನೆ ಮೂಡಿಸಿದೆ.

ADVERTISEMENT

ಜಿಲ್ಲೆಗೆ ಹೊರಗಿನಿಂದ ಬಂದವರ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಅವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತಿದೆ. ಹೀಗೆ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಜಿಲ್ಲೆಯಲ್ಲಿ ಆಂತಕದ ಭಾವವನ್ನು ಕಳೆಯುತ್ತಿದೆ. ಹೋಂ ಕ್ವಾರಂಟೈನ್‌ನಲ್ಲಿದ್ದ ಎಲ್ಲರೂ ಅವಧಿ ಪೂರ್ಣಗೊಳಿಸಿರುವುದು ಮತ್ತಷ್ಟು ಸಕಾರಾತ್ಮಕ ಬೆಳವಣಿಗೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.