ADVERTISEMENT

ಹುಳಿಯಾರು | ಬಾವಿಗೆ ಬಿದ್ದು ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 6:55 IST
Last Updated 11 ಜನವರಿ 2026, 6:55 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಹುಳಿಯಾರು: ಹೋಬಳಿಯ ಚನ್ನಕಾಟಯ್ಯ ಗುಡ್ಲು ಗ್ರಾಮದ ಬಳಿಯ ಬಾವಿಗೆ ಬಿದ್ದು ವಿದ್ಯಾರ್ಥಿ ಜಗದೀಶ್ (14) ಶನಿವಾರ ಮೃತಪಟ್ಟಿದ್ದಾನೆ.

ಕೆಂಕೆರೆ ಗೊಲ್ಲರಹಟ್ಟಿ ಸುರೇಶ್ ಅವರ ಮಗ ಜಗದೀಶ್ ಗ್ರಾಮದ ಕೆ.ಎಂ. ಶಿವಲಿಂಗಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ. ಶನಿವಾರ ಶಾಲೆ ಮುಗಿಸಿ ಮನೆಗೆ ಹೋಗುವಾಗ ಬಾವಿಗೆ ಬಿದ್ದಿದ್ದಾನೆ. ಪೋಷಕರ ಬಳಿ ಶಾಲೆಗೆ ಹೋಗುವುದಿಲ್ಲ ಎಂದು ಪ್ರತಿದಿನ ಹಠ ಮಾಡುತ್ತಿದ್ದ. ಆದರೆ ಪೋಷಕರು ಶಾಲೆಗೆ ಹೋಗುವಂತೆ ಮನವೊಲಿಸಿ ಕಳುಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ADVERTISEMENT

ಮೃತ ದೇಹವನ್ನು ಹೊರ ತೆಗೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.