ಹುಳಿಯಾರು: ಹೋಬಳಿ ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಭರಣಿ ಮಳೆ ಆರಂಭದಲ್ಲಿ ಬಿದ್ದು ನಂತರ ಕೈಕೊಟ್ಟಿದೆ. 10 ದಿನಗಳ ಹಿಂದೆ ಬಿತ್ತನೆಯಾಗಿದ್ದ ಹೆಸರು, ಅಲಸಂದೆ ಮೊಳಕೆಯಲ್ಲಿಯೇ ಬಾಡುತ್ತಿದೆ.
ಪ್ರತಿವರ್ಷ ಯುಗಾದಿ ನಂತರ ಕೃಷಿ ಚಟುವಟಿಕೆ ಆರಂಭಗೊಳ್ಳುತ್ತವೆ. ಮಳೆ ಬಂದ ಭರದಲ್ಲಿ ರೈತರು ಹೆಸರು, ಅಲಸಂದೆ, ಉದ್ದು, ಎಳ್ಳು ಸೇರಿದಂತೆ ಇತರ ಬೀಜಗಳನ್ನು ಬಿತ್ತನೆ ಮಾಡಿದ್ದರು. ಸೋನೆ ಮಳೆ ಹದಕ್ಕೆ ಆಗಿದ್ದ ಬಿತ್ತನೆ ಈಗ ಒಣಗುತ್ತಿದೆ. ಪ್ರಸ್ತುತ ಮಳೆ ಬಂದರೂ ಮರು ಬಿತ್ತನೆಗೆ ಸಮಯ ಮುಗಿದು ಹೋಗಿದೆ.
ಭರಣಿ ಮಳೆ ಪೂರ್ವ ಮುಂಗಾರು ಬಿತ್ತನೆಗೆ ಸಕಾಲವಾಗಿದ್ದು ನಂತರ ದಿನಗಳಲ್ಲಿ ಬಿತ್ತನೆ ಮಾಡಿದರೆ ಬಳೆ ಬರುವುದಿಲ್ಲ ಎಂಬ ನಂಬಿಕೆ ರೈತರಲ್ಲಿದೆ. ದುಬಾರಿ ಬೆಲೆಗೆ ಬೀಜ ತಂದು ಬಿತ್ತನೆ ಮಾಡಿ ಒಣಗಿ ಹೋಗುತ್ತಿರುವುದು ರೈತರ ನಿದ್ದೆಗೆಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.