ADVERTISEMENT

ಪತಿಯಿಂದ ಪತ್ನಿ ಹತ್ಯೆ: ಆರೋಪಿ ಪರಾರಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 7:46 IST
Last Updated 15 ಮಾರ್ಚ್ 2024, 7:46 IST

ಪಾವಗಡ: ತಾಲ್ಲೂಕಿನ ನಿಡಗಲ್‌ ಹೋಬಳಿಯ ಸಿ.ಕೆ‌.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ದಂಡಪ್ಪನಪಾಳ್ಯದಲ್ಲಿ ಶುಕ್ರವಾರ ಚಾಕುವಿನಿಂದ ತಿವಿದು ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾರೆ.

ರಾಮಾಂಜಿನಮ್ಮ(36) ಹತ್ಯೆಯಾದವರು. ಆರೋಪಿ ರಮೇಶ್(42) ಪರಾರಿಯಾಗಿದ್ದಾರೆ. ಮನೆಯಲ್ಲಿ ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದಾರೆ. ಆರೋಪಿ ಪತ್ತೆಗೆ ಪಾವಗಡ ಪೊಲೀಸರು ತನಿಖೆ‌ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT