ADVERTISEMENT

ಅಕ್ರಮ ನೇಮಕಾತಿ: ಮೂವರು ಶಿಕ್ಷಕರು ಅಮಾನತು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 15:20 IST
Last Updated 13 ಫೆಬ್ರುವರಿ 2023, 15:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಧುಗಿರಿ: 2012-13 ಮತ್ತು 2014-15 ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಗ್ರೇಡ್-2 ಸಹ ಶಿಕ್ಷಕರ ನೇಮಕಾತಿ ಅಕ್ರಮ ಸಂಬಂಧ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಮೂವರು ಶಿಕ್ಷಕರನ್ನು ಸೋಮವಾರ ಅಮಾನತುಗೊಳಿಸಲಾಗಿದೆ.

ಕೊರಟಗೆರೆ ತಾಲ್ಲೂಕು ಬುಕ್ಕಪಟ್ಟಣ ಸರ್ಕಾರಿ ಫ್ರೌಡಶಾಲೆಯ ಸಹ ಶಿಕ್ಷಕಿ ಜಿ.ಎನ್. ದೀಪಾರಾಣಿ, ಪಾವಗಡ ತಾಲ್ಲೂಕು ನಾಗಲಮಡಿಕೆ ಸರ್ಕಾರಿ ಫ್ರೌಡಶಾಲೆಯ ಸಹ ಶಿಕ್ಷಕ ಜಿ.ಕೆ. ಮೋಹನ್‌ ಕುಮಾರ್, ಪಾವಗಡ ತಾಲ್ಲೂಕು ವಳ್ಳೂರು ಸರ್ಕಾರಿ ಫ್ರೌಡಶಾಲೆಯ ಸಹ ಶಿಕ್ಷಕ ಮಂಜುನಾಥ ಅಮಾನತುಗೊಂಡ ಶಿಕ್ಷಕರು.

ಸಿಐಡಿ ಅಧಿಕಾರಿಗಳು ಶಾಲೆಗಳಿಂದ ಶಿಕ್ಷಕರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಸದರಿ ಶಿಕ್ಷಕರು ಫೆ.9 ರಿಂದ ಇಂದಿನವರೆಗೂ ಶಾಲಾ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ಅಪರಾಧ ಕೃತ್ಯದಲ್ಲಿ ಭಾಗಿಯಾಗಿ, ಶಿಕ್ಷಣ ಇಲಾಖೆಯನ್ನು ವಂಚಿಸಿ, ಅಕ್ರಮ ನೇಮಕಾತಿ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಶಿಕ್ಷಕರ ವಿರುದ್ಧದ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸುವಂತೆ ಡಿಡಿಪಿಐ ಕೆ.ಜಿ.ರಂಗಯ್ಯ ಆದೇಶ ಹೊರಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.