ADVERTISEMENT

ತೆಲಂಗಾಣದಲ್ಲಿ ಒಳ ಮೀಸಲಾತಿ ಅನುಷ್ಠಾನ: ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 15:33 IST
Last Updated 19 ಮಾರ್ಚ್ 2025, 15:33 IST
ಪಾವಗಡದಲ್ಲಿ ಬುಧವಾರ ದಲಿತ ಸಂಘಟನೆಗಳ ಪದಾಧಿಕಾರಿಗಳು ಸಿಹಿ ಹಂಚಿ ಸಂಭ್ರಮಿಸಿದರು
ಪಾವಗಡದಲ್ಲಿ ಬುಧವಾರ ದಲಿತ ಸಂಘಟನೆಗಳ ಪದಾಧಿಕಾರಿಗಳು ಸಿಹಿ ಹಂಚಿ ಸಂಭ್ರಮಿಸಿದರು   

ಪಾವಗಡ: ಪಟ್ಟಣದ ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ದಲಿತ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ತೆಲಂಗಾಣದಲ್ಲಿ ಒಳಮೀಸಲಾತಿ ಅನುಷ್ಠಾನ ಮಾಡಿರುವ ಹಿನ್ನೆಲೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.

ಮಾದಿಗ ದಂಡೋರ ರಾಷ್ಟ್ರ ಅಧ್ಯಕ್ಷ ಮಂದಕೃಷ್ಟ ಮಾದಿಗ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಲಾಯಿತು.

ಮುಖಂಡ ಟಿ.ಎನ್. ಪೇಟೆ ರಮೇಶ್ ಮಾತನಾಡಿ, ತೆಲಂಗಾಣ ಶಾಸನ ಸಭೆಯಲ್ಲಿ ಒಳಮೀಸಲಾತಿ ವರ್ಗೀಕರಣ ವರದಿಯು ಅವಿರೋಧವಾಗಿ ಅಂಗೀಕಾರವಾಗಿದೆ. ಈಗ ಅಲ್ಲಿ ಒಳಮೀಸಲು ಕೇವಲ ಘೋಷಣೆಯಾಗಿ ಉಳಿದಿಲ್ಲ ಬದಲಾಗಿ ಶಾಸನವಾಗಿದೆ ಎಂದು ತಿಳಿಸಿದರು.

ADVERTISEMENT

ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ದೇಶದಲ್ಲೇ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಮಂದಕೃಷ್ಣ ಮಾದಿಗ ಅವರು ಸುಮಾರು 30 ವರ್ಷ ಸುದೀರ್ಘ ಹೋರಾಟ ಮಾಡಿದ್ದಾರೆ ಎಂದರು.

ದಲಿತ ಮುಖಂಡ ಟಿ.ಎನ್ ಪೇಟೆ ರಮೇಶ್, ವಳ್ಳೂರು ನಾಗೇಶ್, ಕೋರ್ಟ್ ನರಸಪ್ಪ, ಎಎಪಿ ರಾಮಾಂಜಿನಪ್ಪ, ರಾಮಕೃಷ್ಣಪ್ಪ, ಬಿ.ಹೊಸಹಳ್ಳಿ ಮಲ್ಲಿಕಾರ್ಜುನ, ಕೆಪಿ ಲಿಂಗಣ್ಣ, ಮೀನಕುಂಟನಹಳ್ಳಿ ನರಸಿಂಹಪ್ಪ, ನಲಿಗನಹಳ್ಳಿ ಮಂಜುನಾಥ್, ಭೀಮನಕುಂಟೆ ರಾಮಾಂಜಿನಪ್ಪ, ರವಿ, ಸುಬ್ಬರಾಯಪ್ಪ, ಮಂಗಳವಾಡ ಮಂಜುನಾಥ್, ದೇವಲಕೆರೆ ಹನುಮಂತರಾಯ, ರಾಮಾಂಜಿನಪ್ಪ, ಮಂದಲ ಕೆಂಚಪ್ಪ, ಶಿವಶಂಕರ, ಕನ್ನಮೆಡಿ ನಾಗರಾಜು, ಪಳವಳ್ಳಿ ನರಸಿಂಹ, ಹರಿಹರಪುರದ ಅಲ್ಲಪ್ಪ, ಹನುಮತರಾಯಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.