ADVERTISEMENT

ಕುಣಿಗಲ್: ಯುವತಿ ಜತೆ ಅನುಚಿತ ವರ್ತನೆ ವ್ಯಕ್ತಿಗೆ ಥಳಿತ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 5:55 IST
Last Updated 29 ಮಾರ್ಚ್ 2023, 5:55 IST
ಕುಣಿಗಲ್ ಪಟ್ಟಣದ ಬೀದಿಬದಿ ವ್ಯಾಪಾರ ಮಾಡುತ್ತಿದ್ದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಅಪರಿಚಿತ ವ್ಯಕ್ತಿಯನ್ನು ಮಹಿಳೆಯೊಬ್ಬರು ಥಳಿಸುತ್ತಿರುವುದು
ಕುಣಿಗಲ್ ಪಟ್ಟಣದ ಬೀದಿಬದಿ ವ್ಯಾಪಾರ ಮಾಡುತ್ತಿದ್ದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಅಪರಿಚಿತ ವ್ಯಕ್ತಿಯನ್ನು ಮಹಿಳೆಯೊಬ್ಬರು ಥಳಿಸುತ್ತಿರುವುದು   

ಕುಣಿಗಲ್: ಬೀದಿಬದಿ ವ್ಯಾಪಾರ ಮಾಡುತ್ತಿದ್ದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ಮಹಿಳೆಯರು ತೀವ್ರವಾಗಿ ಥಳಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಪಟ್ಟಣದಲ್ಲಿ ನಡೆದಿದೆ.

ಯುವತಿ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದು, ಅಪರಿಚಿತ ವ್ಯಕ್ತಿ ಸೋಮವಾರ ದಾಳಿ ನಡೆಸಿ ಹಣ ಕೀಳಲು ಯತ್ನಿಸಿ ವಿಫಲನಾಗಿ ಪರಾರಿಯಾಗಿದ್ದ. ಬೆಳಿಗ್ಗೆಯೂ ಪ್ರಯತ್ನ ಪಟ್ಟಾಗ ಆಕೆಯ ಪೋಷಕರು ಸೇರಿದಂತೆ ಸಾರ್ವಜನಿಕರು ಸೇರಿ ಆತನನ್ನು ಕೈಕಾಲು ಕಟ್ಟಿ ಹಾಕಿ ತೀವ್ರವಾಗಿ ಥಳಿಸಿದರು.

ಬಳಿಕ ನೆರೆದಿದ್ದ ನಾಗರಿಕರು ಆತನಿಗೆ ಬುದ್ಧಿ ಹೇಳಿ ಕಳುಹಿಸಿಕೊಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.