
ಪ್ರಜಾವಾಣಿ ವಾರ್ತೆ
ತುಮಕೂರು: ಹಳ್ಳಿಯಲ್ಲಿ ಕೂಲಿ ಮಾಡುವ ಮಹಿಳೆಯರ ಬದುಕು ಸುಧಾರಿಸಲು ಪ್ರತಿ ತಿಂಗಳು ₹2 ಸಾವಿರ ನೀಡಲಾಗುತ್ತಿದೆ. ಗ್ಯಾರಂಟಿ ಕಾರ್ಯಕ್ರಮ ಕೊಡದಿದ್ದರೆ ಜನ ಏನಾಗಬೇಕು? ರಸ್ತೆ, ಚರಂಡಿ ನಿರ್ಮಾಣದಿಂದ ಜನರ ಜೀವನ ಉದ್ಧಾರ ಆಗುತ್ತದೆಯೇ ಎಂದು ಗೃಹ ಸಚಿವ ಜಿ.ಪರಮೇಶ್ವರ ಪ್ರಶ್ನಿಸಿದ್ದಾರೆ.
ಶನಿವಾರ ಇಲ್ಲಿ ಬಂಜಾರ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು, ‘ಜನರ ಶೋಷಣೆ ಮುಂದುವರಿಯಬಾರದು ಎಂದೇ ಐದು ಗ್ಯಾರಂಟಿಗಳಿಗೆ ವರ್ಷಕ್ಕೆ ₹58 ಸಾವಿರ ಕೋಟಿ ನೀಡಲಾಗುತ್ತಿದೆ. ಕೊಡುವುದು ನಿಲ್ಲಿಸಿದರೆ ಜನರು ಬದುಕು ಏನಾಗಬೇಕು’ ಎಂದು ಕೇಳಿದರು.
‘ರಸ್ತೆ, ಚರಂಡಿ, ನೀರಾವರಿ ಯೋಜನೆ, ಮನೆ ನಿರ್ಮಾಣದಂತಹ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ನಿಲ್ಲಿಸಿಲ್ಲ. ಒಂದಷ್ಟು ನಿಧಾನ ಆಗಿರಬಹುದು ಅಷ್ಟೇ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.